ನಿಷೇಧಿಸಲಾದ ಪರದೂಷಣೆ ಯಾವುದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಾರೆ. ಅದು ಅನುಪಸ್ಥಿತನಾಗಿರುವ ಒಬ್ಬ ಮುಸಲ್ಮಾನನ ಬಗ್ಗೆ ಅವನಿಗೆ ಇಷ್ಟವಿಲ್ಲದ್ದನ್ನು ಹೇಳುವುದು. ಅದು ಅವನ ದೇಹದ ಆಕೃತಿ ಅಥವಾ ಗುಣಕ್ಕೆ ಸಂಬಂಧಿಸಿದ್ದಾದರೂ ಸಹ. ಉದಾಹರಣೆಗೆ, ಒಕ್ಕಣ್ಣ, ಮೋಸಗಾರ, ಸುಳ್ಳುಗಾರ ಮುಂತಾದ ಅವನ ಕೆಟ್ಟ ಗುಣಗಳನ್ನು ಹೇಳುವುದು. ಈ ಗುಣಗಳು ಅವನಲ್ಲಿದ್ದರೂ ಸಹ. ಇನ್ನು, ಆ ಗುಣಗಳು ಅವನಲ್ಲಿಲ್ಲದಿದ್ದರೆ ಅದು ಸುಳ್ಳಾರೋಪವಾಗುತ್ತದೆ. ಅಂದರೆ ಒಬ್ಬ ವ್ಯಕ್ತಿಯಲ್ಲಿ ಇಲ್ಲದ್ದನ್ನು ಇದೆಯೆಂದು ಆರೋಪಿಸುವುದು. ಇದು ಪರದೂಷಣೆಗಿಂತಲೂ ಗಂಭೀರವಾಗಿದೆ.