ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಜನರು ಅತಿಹೆಚ್ಚಾಗಿ ಸ್ವರ್ಗಕ್ಕೆ ಹೋಗಲು ಎರಡು ಕಾರಣಗಳಿವೆ. ಅವು: ಅಲ್ಲಾಹನ ಭಯ ಮತ್ತು ಉತ್ತಮ ನಡವಳಿಕೆ. ಅಲ್ಲಾಹನ ಭಯ (ತಕ್ವಾ) ಎಂದರೆ ನೀವು ನಿಮ್ಮ ಮತ್ತು ಅಲ್ಲಾಹನ ಶಿಕ್ಷೆಯ ಮಧ್ಯೆ ರಕ್ಷಣಾಕವಚವಾಗಿ ಇಡುವಂತದ್ದು. ಇದು ಅವನ ಆದೇಶಗಳನ್ನು ಪಾಲಿಸುವುದು ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಿರುವುದಾಗಿದೆ. ಉತ್ತಮ ನಡವಳಿಕೆ ಎಂದರೆ ಮಂದಹಾಸ ಬೀರುವುದು, ಸಹಾಯ ಮಾಡುವುದು ಮತ್ತು ತೊಂದರೆಗಳನ್ನು ತಡೆಗಟ್ಟುವುದು. ಜನರು ಅತಿಹೆಚ್ಚಾಗಿ ನರಕಕ್ಕೆ ಹೋಗಲು ಕೂಡ ಎರಡು ಕಾರಣಗಳಿವೆ. ಅವು: ನಾಲಿಗೆ ಮತ್ತು ಗುಹ್ಯಾಂಗ. ಸುಳ್ಳು ಹೇಳುವುದು, ಪರದೂಷಣೆ ಮಾಡುವುದು, ಚಾಡಿ ಹೇಳುವುದು ಮುಂತಾದವುಗಳು ನಾಲಿಗೆಯಿಂದ ಸಂಭವಿಸುವ ಪಾಪಗಳಾಗಿವೆ. ವ್ಯಭಿಚಾರ, ಸಲಿಂಗರತಿ ಮುಂತಾದವುಗಳು ಗುಹ್ಯಾಂಗದಿಂದ ಸಂಭವಿಸುವ ಪಾಪಗಳಾಗಿವೆ.