ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಒಬ್ಬ ಮುಸಲ್ಮಾನನಿಗೆ ಇನ್ನೊಬ್ಬ ಮುಸಲ್ಮಾನನ ಮೇಲೆ ಐದು ಹಕ್ಕುಗಳಿವೆ: ಸಲಾಂ ಹೇಳಿದರೆ ಉತ್ತರಿಸುವುದು, ರೋಗಿಯನ್ನು ಭೇಟಿ ಮಾಡುವುದು, ಮೃತದೇಹವನ್ನು ಹಿಂಬಾಲಿಸುವುದು, ಆಮಂತ್ರಣವನ್ನು ಸ್ವೀಕರಿಸುವುದು ಮತ್ತು ಸೀನಿದರೆ ತಶ್ಮೀತ್ ಮಾಡುವುದು.” Sahih/Authentic. - Al-Bukhari and Muslim
explain-icon

ವಿವರಣೆ

ಒಬ್ಬ ಮುಸಲ್ಮಾನನಿಗೆ ಇನ್ನೊಬ್ಬ ಮುಸಲ್ಮಾನನ ಮೇಲಿರುವ ಕೆಲವು ಹಕ್ಕುಗಳನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ವಿವರಿಸುತ್ತಾರೆ. ಮೊದಲನೆಯ ಹಕ್ಕು, ಮುಸಲ್ಮಾನನು ಸಲಾಂ ಹೇಳಿದರೆ ಅದಕ್ಕೆ ಉತ್ತರಿಸುವುದು. ಎರಡನೆಯ ಹಕ್ಕು: ರೋಗಿಯಾದರೆ ಅವನನ್ನು ಭೇಟಿ ಮಾಡುವುದು. ಮೂರನೆಯ ಹಕ್ಕು: ಅವನ ಮೃತದೇಹವನ್ನು ಮನೆಯಿಂದ ನಮಾಝ್ ಮಾಡುವ ಸ್ಥಳದವರೆಗೆ, ಅಲ್ಲಿಂದ ದಫನ ಮಾಡುವ ಸ್ಥಳದವರೆಗೆ ದಫನ ಕಾರ್ಯ ಮುಗಿಯುವ ತನಕ ಹಿಂಬಾಲಿಸುವುದು. ನಾಲ್ಕನೆಯ ಹಕ್ಕು: ಅವನು ಮದುವೆಯ ಔತಣ ಅಥವಾ ಇತರ ಸಮಾರಂಭಗಳಿಗೆ ಆಮಂತ್ರಿಸಿದರೆ ಆಮಂತ್ರಣವನ್ನು ಸ್ವೀಕರಿಸುವುದು. ಐದನೆಯ ಹಕ್ಕು: ಸೀನಿದ ನಂತರ ಅವನು “ಅಲ್-ಹಮ್ದುಲಿಲ್ಲಾಹ್” ಎಂದು ಹೇಳಿದರೆ “ಯರ್ಹಮುಕಲ್ಲಾಹ್” ಎಂದು ಹೇಳುವುದು, ನಂತರ ಅವನು ಅದಕ್ಕೆ ಉತ್ತರವಾಗಿ “ಯಹ್ದೀಕುಮುಲ್ಲಾಹು ವಯುಸ್ಲಿಹು ಬಾಲಕುಮ್” ಎಂದು ಹೇಳುವುದು.

explain-icon

ಹದೀಸಿನ ಪ್ರಯೋಜನಗಳು

  • ಮುಸಲ್ಮಾನರು ಪರಸ್ಪರ ಹೊಂದಿರುವ ಹಕ್ಕುಗಳಿಗೆ ಒತ್ತು ಕೊಟ್ಟಿರುವುದು ಮತ್ತು ಅವರ ನಡುವಿನ ಬಾಂಧವ್ಯ ಹಾಗೂ ಪ್ರೀತಿಗೆ ಬಲ ನೀಡಿರುವುದು ಇಸ್ಲಾಂ ಧರ್ಮದ ಶ್ರೇಷ್ಠ ಗುಣವಾಗಿದೆ.
explain-icon

ವರ್ಗಗಳು

explain-icon

ಇನ್ನಷ್ಟು