ಮೂರು ರಾತ್ರಿಗಿಂತ ಹೆಚ್ಚು ತನ್ನ ಮುಸ್ಲಿಂ ಸಹೋದರನೊಂದಿಗೆ ಸಿಟ್ಟು ಮಾಡಿಕೊಳ್ಳುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿರೋಧಿಸಿದ್ದಾರೆ. ಅವರಿಬ್ಬರು ಭೇಟಿಯಾಗುವಾಗ ಯಾರೂ ಸಲಾಂ ಹೇಳುವುದಿಲ್ಲ ಮತ್ತು ಮಾತನಾಡುವುದಿಲ್ಲ. ಸಿಟ್ಟು ಮಾಡಿಕೊಂಡಿರುವ ಇವರಿಬ್ಬರಲ್ಲಿ ಸಿಟ್ಟನ್ನು ಕೊನೆಗೊಳಿಸಿ ಮೊದಲು ಸಲಾಂ ಹೇಳುವವನೇ ಅತಿಶ್ರೇಷ್ಠನು. ಸಿಟ್ಟು ಎಂಬುದರ ಮೂಲಕ ಇಲ್ಲಿ ಉದ್ದೇಶಿಸಿರುವುದು ವೈಯಕ್ತಿಕ ಉದ್ದೇಶಕ್ಕಾಗಿರುವ ಸಿಟ್ಟನ್ನಾಗಿದೆ. ಆದರೆ ಅಲ್ಲಾಹನಿಗಾಗಿ ಸಿಟ್ಟು ಮಾಡಿಕೊಳ್ಳುವುದು, ಅಂದರೆ ಪಾಪಿಗಳು, ನೂತನವಾದಿಗಳು, ದುಷ್ಕರ್ಮಿಗಳು ಮುಂತಾದವರೊಡನೆ ಸಿಟ್ಟು ಮಾಡಿಕೊಳ್ಳುವುದಕ್ಕೆ ಸಮಯದ ಮಿತಿಯಿಲ್ಲ. ಇದು ಒಳಿತಿನ ದೃಷ್ಟಿಯಿಂದ ಮಾಡಿಕೊಳ್ಳುವ ಸಿಟ್ಟಾಗಿದ್ದು, ಸಿಟ್ಟಿನ ಕಾರಣವು ನಿವಾರಣೆಯಾದರೆ ಸಿಟ್ಟು ನಿವಾರಣೆಯಾಗುತ್ತದೆ.