ಅಬೂ ಅಬ್ದುರ್‍ರಹ್ಮಾನ್ ಸುಲಮಿ (ಅಲ್ಲಾಹು ಅವರಿಗೆ ಕರುಣೆ ತೋರಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರ ಸಂಗಡಿಗರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪೈಕಿ ನಮಗೆ ಕುರ್‌ಆನ್ ಕಲಿಸಿಕೊಡುತ್ತಿದ್ದವರು ಹೇಳುತ್ತಿದ್ದರು: ಅವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ನಂತರ ಆ ಹತ್ತು ವಚನಗಳಲ್ಲಿರುವ ಜ್ಞಾನ ಮತ್ತು ಕರ್ಮವನ್ನು ಕಲಿತುಕೊಳ್ಳದೆ ಅವರು ಮುಂದಿನ ಹತ್ತು ವಚನಗಳಿಗೆ ಹೋಗುತ್ತಿರಲಿಲ್ಲ. ಅವರು ಹೇಳುತ್ತಿದ್ದರು: ನಾವು ಜ್ಞಾನ ಮತ್ತು ಕರ್ಮವನ್ನು ಒಟ್ಟೊಟ್ಟಿಗೆ ಕಲಿಯುತ್ತಿದ್ದೆವು." Hasan/Sound. - Ahmad
explain-icon

ವಿವರಣೆ

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ಆ ಹತ್ತು ವಚನಗಳಲ್ಲಿರುವ ಜ್ಞಾನವನ್ನು ಕಲಿತು ಅದರ ಪ್ರಕಾರ ಕರ್ಮಗಳನ್ನು ಮಾಡುವ ತನಕ ಅವರು ಮುಂದಿನ ಹತ್ತು ವಚನಗಳನ್ನು ಕಲಿಯಲು ಹೋಗುತ್ತಿರಲಿಲ್ಲ. ಅವರು ಜ್ಞಾನ ಮತ್ತು ಕರ್ಮವನ್ನು ಒಟ್ಟೊಟ್ಟಿಗೆ ಕಲಿಯುತ್ತಿದ್ದರು.

explain-icon

ಹದೀಸಿನ ಪ್ರಯೋಜನಗಳು

  • ಸಹಾಬಿಗಳ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಶ್ರೇಷ್ಠತೆಯನ್ನು ಮತ್ತು ಕುರ್‌ಆನ್ ಕಲಿಯಲು ಅವರಿಗಿದ್ದ ಉತ್ಸಾಹವನ್ನು ಈ ಹದೀಸ್ ವಿವರಿಸುತ್ತದೆ.
  • ಜ್ಞಾನ ಮತ್ತು ಅದರ ಆಧಾರದಲ್ಲಿ ಕರ್ಮಗಳನ್ನು ಮಾಡುವುದರ ಮೂಲಕ ಕುರ್‌ಆನ್ ಕಲಿಯಬೇಕಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ. ಇದಲ್ಲದೆ ಕುರ್‌ಆನ್ ಕಲಿಯುವುದು ಎಂದರೆ ಕೇವಲ ಪಠಿಸುವುದು ಮತ್ತು ಕಂಠಪಾಠ ಮಾಡುವುದಲ್ಲ.
  • ಮಾತನಾಡುವುದಕ್ಕೆ ಮತ್ತು ಕರ್ಮವೆಸಗುವುದಕ್ಕೆ ಮುಂಚಿತವಾಗಿ ಅದರ ಜ್ಞಾನವನ್ನು ಹೊಂದಿರಬೇಕೆಂದು ಈ ಹದೀಸ್ ತಿಳಿಸುತ್ತದೆ.
explain-icon

ವರ್ಗಗಳು

explain-icon

ಇನ್ನಷ್ಟು