ನಾಲ್ಕು ವಚನಗಳು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿವೆಯೆಂದು ಪ್ರವಾದಿಯವರು ಇಲ್ಲಿ ವಿವರಿಸುತ್ತಿದ್ದಾರೆ. ಅವು: ಸುಬ್‌ಹಾನಲ್ಲಾಹ್: ಎಂದರೆ ಅಲ್ಲಾಹನನ್ನು ಎಲ್ಲಾ ರೀತಿಯ ನ್ಯೂನತೆ ಅಥವಾ ಕೊರತೆಗಳಿಂದ ಪರಿಶುದ್ಧಗೊಳಿಸುವುದು. ಅಲ್-ಹಮ್ದುಲಿಲ್ಲಾಹ್: ಇದು ಅಲ್ಲಾಹನನ್ನು ಪ್ರೀತಿಸುವುದು ಮತ್ತು ಅತಿಯಾಗಿ ಗೌರವಿಸುವುದರ ಜೊತೆಗೆ ಅವನನ್ನು ಸಂಪೂರ್ಣತೆಯ ಗುಣಗಳಿಂದ ವರ್ಣಿಸುವುದಾಗಿದೆ. ಲಾ ಇಲಾಹ ಇಲ್ಲಲ್ಲಾಹ್: ಅಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ. ಅಲ್ಲಾಹು ಅಕ್ಬರ್: ಅಂದರೆ ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ಪರಮೋಚ್ಛನು, ಮಹಾಮಹಿಮನು ಮತ್ತು ಪ್ರತಾಪವುಳ್ಳವನು. ಇವುಗಳ ಶ್ರೇಷ್ಠತೆ ಮತ್ತು ಇವುಗಳಿಗೆ ದೊರಕುವ ಪ್ರತಿಫಲವನ್ನು ಪಡೆಯಬೇಕಾದರೆ ಇವುಗಳನ್ನು ಅನುಕ್ರಮವಾಗಿಯೇ ಹೇಳಬೇಕೆಂಬ ನಿಬಂಧನೆಯಿಲ್ಲ.