ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಅಶ್ಲೀಲ ಕೃತ್ಯಗಳನ್ನು ಮಾಡದೆ—ಅಶ್ಲೀಲ ಕೃತ್ಯಗಳು ಎಂದರೆ ಸಂಭೋಗ ಮತ್ತು ಸಂಭೋಗಕ್ಕೆ ಮುನ್ನುಡಿಯಾಗಿ ಮಾಡುವ ಚುಂಬನ, ಆಲಿಂಗನ, ಸರಸ ಮುಂತಾದ ಕೃತ್ಯಗಳು. ಅಶ್ಲೀಲ ಮಾತುಗಳೂ ಇದರಲ್ಲಿ ಸೇರುತ್ತವೆ—ಮತ್ತು ದುಷ್ಕರ್ಮಗಳನ್ನು ಮಾಡದೆ—ದುಷ್ಕರ್ಮಗಳು ಎಂದರೆ ಪಾಪಗಳು ಮತ್ತು ಕೆಡುಕುಗಳು. ಇಹ್ರಾಮ್‌ನಲ್ಲಿರುವಾಗ ನಿಷೇಧಿಸಲಾಗಿರುವ ಕಾರ್ಯಗಳನ್ನು ಮಾಡುವುದು ಕೂಡ ಇದರಲ್ಲಿ ಒಳಪಡುತ್ತವೆ—ಹಜ್ಜ್ ನಿರ್ವಹಿಸುವ ವ್ಯಕ್ತಿ ಪಾಪರಹಿತವಾಗಿ ಹುಟ್ಟುವ ಮಗುವಿನಂತೆ ಸಂಪೂರ್ಣ ಪಾಪಮುಕ್ತನಾಗಿ ಹಜ್ಜ್‌ನಿಂದ ಮರಳುತ್ತಾನೆ.