ತನ್ನನ್ನು ಪ್ರಶಂಸಿಸುವಾಗ ಮಿತಿಮೀರುವುದು ಮತ್ತು ಧರ್ಮವು ವಿಧಿಸಿದ ಎಲ್ಲೆಯನ್ನು ಮೀರುವುದು, ಅಲ್ಲಾಹನಿಗೆ ಮಾತ್ರ ಸೀಮಿತವಾಗಿರುವ ಗುಣಲಕ್ಷಣಗಳನ್ನು ಅಥವಾ ಅವನು ಮಾತ್ರ ಮಾಡುವ ಕ್ರಿಯೆಗಳನ್ನು ತನಗೆ ಸೇರಿಸಿ ಹೇಳುವುದು, ತನಗೆ ಆಗೋಚರ ಜ್ಞಾನವಿದೆಯೆಂದು ಹೇಳುವುದು, ಅಥವಾ ಅಲ್ಲಾಹನೊಂದಿಗೆ ತನ್ನನ್ನು ಕೂಡ ಕರೆದು ಪ್ರಾರ್ಥಿಸುವುದು ಮುಂತಾದ ಕ್ರಿಶ್ಚಿಯನ್ನರು ಈಸಾ ಬಿನ್ ಮರ್ಯಮ್ (ಅವರ ಮೇಲೆ ಶಾಂತಿಯಿರಲಿ) ರೊಡನೆ ಮಾಡಿದ್ದನ್ನು ತನ್ನೊಡನೆ ಮಾಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿರೋಧಿಸುತ್ತಿದ್ದಾರೆ ನಂತರ, ತಾನು ಅಲ್ಲಾಹನ ಒಬ್ಬ ದಾಸ ಮಾತ್ರ ಎಂದು ಅವರು ವಿವರಿಸುತ್ತಾರೆ. ಅವರನ್ನು ಅಲ್ಲಾಹನ ದಾಸ ಮತ್ತು ಸಂದೇಶವಾಹಕ ಎಂದು ಕರೆಯಬೇಕೆಂದು ಆದೇಶಿಸುತ್ತಾರೆ.