ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಕುರ್‌ಆನ್ ಪಠಿಸುವವನು, ಅದರ ಪ್ರಕಾರ ಜೀವನ ನಡೆಸಿದವನು ಮತ್ತು ಸದಾ ಕುರ್‌ಆನ್ ಪಠಿಸುತ್ತಾ ಕಂಠಪಾಠ ಮಾಡುತ್ತಾ ಇದ್ದವನೊಂದಿಗೆ ಅವನು ಸ್ವರ್ಗವನ್ನು ಪ್ರವೇಶಿಸಿದಾಗ ಹೀಗೆ ಹೇಳಲಾಗುವುದು: "ನೀನು ಕುರ್‌ಆನ್ ಪಠಿಸು ಮತ್ತು ಅದರ ಮೂಲಕ ಸ್ವರ್ಗದ ಪದವಿಗಳಿಗೆ ಏರುತ್ತಾ ಹೋಗು. ಇಹಲೋಕದಲ್ಲಿ ಶಾಂತವಾಗಿ ಮತ್ತು ಸಾವಧಾನದಿಂದ ಪಠಿಸುತ್ತಿದ್ದಂತೆ ಪಠಿಸು. ನೀನು ಪಠಿಸುವ ಕೊನೆಯ ವಚನದ ಬಳಿ ನಿನ್ನ ಪದವಿಯಿದೆ."