ಕುರ್‌ಆನಿನ ಬಗ್ಗೆ ನಿಗಾ ವಹಿಸಬೇಕೆಂದು ಮತ್ತು ಅದನ್ನು ಕಂಠಪಾಠ ಮಾಡಿದ ನಂತರ ಅದು ಮರೆತು ಹೋಗದಿರಲು ಅದನ್ನು ನಿರಂತರ ಪಠಿಸುತ್ತಿರಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುತ್ತಿದ್ದಾರೆ. ನಂತರ ತಮ್ಮ ಮಾತಿಗೆ ಒತ್ತು ಕೊಡುತ್ತಾ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಮೇಲೆ ಆಣೆಮಾಡಿ ಹೇಳುವುದೇನೆಂದರೆ, ತಮ್ಮ ಮುಂಗಾಲಿನ ಮಧ್ಯದಲ್ಲಿ ಹಗ್ಗದಿಂದ ಕಟ್ಟಿ ಹಾಕಲಾಗಿರುವ ಒಂಟೆಗಳು ತಪ್ಪಿಸಿಕೊಳ್ಳುವುದಕ್ಕಿಂತಲೂ ವೇಗವಾಗಿ ಪವಿತ್ರ ಕುರ್‌ಆನ್ ಸ್ಮೃತಿ ಪಟಲದಿಂದ ಮಾಸಿ ಹೋಗುತ್ತದೆ. ಮನುಷ್ಯನು ಅದರ ಬಗ್ಗೆ ನಿಗಾ ವಹಿಸಿದರೆ, ಅದು ಅವನೊಂದಿಗೆ ಇರುತ್ತದೆ. ಆದರೆ, ಅವನು ಅದನ್ನು ನಿರ್ಲಕ್ಷಿಸಿದರೆ, ಅದು ಹೊರಟು ಹೋಗುತ್ತದೆ ಮತ್ತು ಕಳೆದು ಹೋಗುತ್ತದೆ.