ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನನ್ನ ಒಂಟೆ ಸತ್ತಿದೆ. ನನ್ನನ್ನು ನನ್ನ ಊರಿಗೆ ತಲುಪಿಸುವ ಒಂದು ಒಂಟೆಯನ್ನು ಕೊಡಿ." ಆದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತನ್ನಲ್ಲಿ ಸವಾರಿ ಮಾಡುವ ಒಂಟೆಯಿಲ್ಲವೆಂದು ಹೇಳಿದರು. ಆಗ ಅಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವನಿಗೆ ಒಂಟೆಯನ್ನು ನೀಡುವ ವ್ಯಕ್ತಿಯನ್ನು ನಾನು ತೋರಿಸುತ್ತೇನೆ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಒಂಟೆಯನ್ನು ದಾನ ಮಾಡುವ ವ್ಯಕ್ತಿಗೆ ಸಿಗುವ ಪ್ರತಿಫಲದಲ್ಲಿ ಇವನೂ ಭಾಗಿಯಾಗುತ್ತಾನೆಂದು ಹೇಳಿದರು. ಏಕೆಂದರೆ ಅವನು ಒಂಟೆಯ ಅಗತ್ಯವಿರುವ ಆ ವ್ಯಕ್ತಿಗೆ ಒಂಟೆ ನೀಡುವ ವ್ಯಕ್ತಿಯನ್ನು ತೋರಿಸಿಕೊಟ್ಟಿದ್ದಾನೆ.