ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುವುದೇನೆಂದರೆ, ಒಬ್ಬ ದಾಸ ಪಾಪ ಮಾಡಿದ ನಂತರ, "ಓ ಅಲ್ಲಾಹ್! ನನ್ನನ್ನು ಕ್ಷಮಿಸು" ಎಂದು ಹೇಳುತ್ತಾನೆ. ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ. ಆದರೆ ಪಾಪವನ್ನು ಕ್ಷಮಿಸುವ, ಮರೆಮಾಚುವ, ಮಾಫಿ ಮಾಡುವ ಮತ್ತು ಪಾಪ ಮಾಡಿದ್ದಕ್ಕಾಗಿ ಶಿಕ್ಷಿಸುವ ಒಬ್ಬ ಪರಿಪಾಲಕ ಅವನಿಗಿದ್ದಾನೆ ಎಂದು ಅವನು ತಿಳಿದಿದ್ದಾನೆ. ಆದ್ದರಿಂದ ನಾನು ಅವನನ್ನು ಕ್ಷಮಿಸಿದ್ದೇನೆ." ನಂತರ, ಆ ದಾಸ ಮತ್ತೆ ಪಾಪವನ್ನು ಮಾಡಿ ಪ್ರಾರ್ಥಿಸುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ. ಆದರೆ ಪಾಪವನ್ನು ಕ್ಷಮಿಸುವ, ಮರೆಮಾಚುವ, ಮಾಫಿ ಮಾಡುವ ಮತ್ತು ಪಾಪ ಮಾಡಿದ್ದಕ್ಕಾಗಿ ಶಿಕ್ಷಿಸುವ ಒಬ್ಬ ಪರಿಪಾಲಕ ಅವನಿಗಿದ್ದಾನೆ ಎಂದು ಅವನು ತಿಳಿದಿದ್ದಾನೆ. ಆದ್ದರಿಂದ ನಾನು ನನ್ನ ದಾಸನಿಗೆ ಕ್ಷಮಿಸಿದ್ದೇನೆ." ನಂತರ, ಆ ದಾಸ ಮತ್ತೆ ಪಾಪವನ್ನು ಮಾಡಿ ಪ್ರಾರ್ಥಿಸುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ. ಆದರೆ ಪಾಪವನ್ನು ಕ್ಷಮಿಸುವ, ಮರೆಮಾಚುವ, ಮಾಫಿ ಮಾಡುವ ಮತ್ತು ಪಾಪ ಮಾಡಿದ್ದಕ್ಕಾಗಿ ಶಿಕ್ಷಿಸುವ ಒಬ್ಬ ಪರಿಪಾಲಕ ಅವನಿಗಿದ್ದಾನೆ ಎಂದು ಅವನು ತಿಳಿದಿದ್ದಾನೆ. ಆದ್ದರಿಂದ ನಾನು ನನ್ನ ದಾಸನಿಗೆ ಕ್ಷಮಿಸಿದ್ದೇನೆ." ಅವನಿಗೆ ಇಷ್ಟವಿರುವುದನ್ನು ಅವನು ಮಾಡಲಿ. ಅವನು ಪ್ರತಿ ಬಾರಿ ಪಾಪ ಮಾಡಿದಾಗಲೂ, ಆ ಪಾಪವನ್ನು ತೊರೆದು, ಪಶ್ಚಾತ್ತಾಪಪಟ್ಟು, ಮತ್ತೆ ಆ ಪಾಪವನ್ನು ಮಾಡುವುದಿಲ್ಲವೆಂದು ನಿರ್ಧರಿಸುತ್ತಾನೆ. ಆದರೆ ಅವನ ಮನಸ್ಸು ಅವನನ್ನು ಸೋಲಿಸುತ್ತದೆ ಅವನು ಮತ್ತೆ ಮತ್ತೆ ಪಾಪ ಮಾಡುತ್ತಾನೆ. ಅವನು ಹೀಗೆ ಪಾಪ ಮಾಡಿದ ನಂತರ ಪಶ್ಚಾತ್ತಾಪಪಡುತ್ತಿರುವ ತನಕ ನಾನು ಅವನಿಗೆ ಕ್ಷಮಿಸುತ್ತಲೇ ಇರುತ್ತೇನೆ. ಪಶ್ಚಾತ್ತಾಪವು ಅದಕ್ಕಿಂತ ಮುಂಚೆ ಮಾಡಿದ ಪಾಪಗಳನ್ನು ನಿರ್ಮೂಲನ ಮಾಡುತ್ತದೆ.