ಸಹಾಬಿಗಳಲ್ಲಿ (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಒಬ್ಬರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಉಪಕಾರವಾಗುವ ಏನಾದರೊಂದು ವಿಷಯವನ್ನು ತಿಳಿಸಬೇಕೆಂದು ವಿನಂತಿಸಿದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಡನೆ "ಕೋಪಗೊಳ್ಳಬೇಡಿ" ಎಂದು ಹೇಳಿದರು. ಇದರ ಅರ್ಥ: ಕೋಪಕ್ಕೆ ಕಾರಣವಾಗುವ ಎಲ್ಲಾ ವಿಷಯಗಳಿಂದಲೂ ದೂರವಿರುವುದು, ಕೋಪ ಬಂದರೆ ಮನಸ್ಸನ್ನು ನಿಯಂತ್ರಿಸುವುದು, ಮತ್ತು ಕೋಪದಿಂದ ಕೊಲ್ಲುವುದು, ಥಳಿಸುವುದು, ನಿಂದಿಸುವುದು ಮುಂತಾದವುಗಳಿಗೆ ಮುಂದಾಗದಿರುವುದು. ಆ ವ್ಯಕ್ತಿ ಪುನಃ ಪುನಃ ಹಿತವಚನ ನೀಡಬೇಕೆಂದು ಹೇಳಿದಾಗಲೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಕೋಪಗೊಳ್ಳಬೇಡಿ." ಎಂದು ಹೇಳುವುದರ ಹೊರತು ಬೇರೇನೂ ಹೇಳಲಿಲ್ಲ.