ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುವ ಪ್ರತಿಯೊಬ್ಬ ಮುಸಲ್ಮಾನನಿಗೂ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಅವನಿಗೆ ಹತ್ತು ಒಳಿತುಗಳನ್ನು ಮಾಡಿದಷ್ಟು ಆ ಪ್ರತಿಫಲವನ್ನು ದ್ವಿಗುಣಗೊಳಿಸಲಾಗುತ್ತದೆ. ನಂತರ ಅವರು ಅದನ್ನು ವಿವರಿಸುತ್ತಾ ಹೀಗೆ ಹೇಳುತ್ತಾರೆ: "ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಆದರೆ, ಅಲಿಫ್ ಒಂದು ಅಕ್ಷರವಾಗಿದೆ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಒಂದು ಅಕ್ಷರವಾಗಿದೆ." ಅಲಿಫ್-ಲಾಮ್-ಮೀಮ್ ಮೂರು ಅಕ್ಷರಗಳಾಗಿದ್ದು ಅದನ್ನು ಪಠಿಸಿದರೆ ಮೂವತ್ತು ಒಳಿತುಗಳನ್ನು ಮಾಡಿದ ಪ್ರತಿಫಲ ದೊರಕುತ್ತದೆ.