ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಇಹಲೋಕದ ಬೆಂಕಿಯು ನರಕದ ಬೆಂಕಿಯ ಎಪ್ಪತ್ತನೇ ಒಂದು ಭಾಗವಾಗಿದೆ. ಅಂದರೆ, ಪರಲೋಕದ ಬೆಂಕಿಯು ಇಹಲೋಕದ ಬೆಂಕಿಗಿಂತ ಅರುವತ್ತೊಂಬತ್ತು ಪಟ್ಟು ಹೆಚ್ಚು ಉರಿಯುವ ಶಕ್ತಿಯನ್ನು ಹೊಂದಿದೆ. ಪ್ರತಿಯೊಂದು ಭಾಗವೂ ಇಹಲೋಕದ ಬೆಂಕಿಯಷ್ಟೇ ಉರಿಯನ್ನು ಹೊಂದಿದೆ. ಆಗ ಒಬ್ಬರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನರಕವಾಸಿಗಳನ್ನು ಶಿಕ್ಷಿಸಲು ಇಹಲೋಕದ ಬೆಂಕಿ ಸಾಕಷ್ಟು ಉರಿಯನ್ನು ಹೊಂದಿದೆಯಲ್ಲವೇ!" ಆಗ ಅವರು ಹೇಳಿದರು: "ಪರಲೋಕದ ಬೆಂಕಿಗೆ ಇಹಲೋಕದ ಬೆಂಕಿಗಿಂತ ಅರುವತ್ತೊಂಬತ್ತು ಭಾಗ ಹೆಚ್ಚು ಉರಿಯನ್ನು ನೀಡಲಾಗಿದೆ. ಪ್ರತಿಯೊಂದು ಭಾಗವೂ ಇಹಲೋಕದ ಬೆಂಕಿಯಷ್ಟೇ ಉರಿಯನ್ನು ಹೊಂದಿವೆ."