ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಯಹೂದಿಗಳೊಡನೆ ಯುದ್ಧ ಮಾಡುವ ತನಕ ಮತ್ತು ಒಂದು ಬಂಡೆಯು ಅದರ ಹಿಂದೆ ಅಡಗಿರುವ ಯಹೂದಿಯನ್ನು ತೋರಿಸಿ, "ಓ ಮುಸಲ್ಮಾನನೇ! ಇಗೋ ನನ್ನ ಹಿಂದೆ ಒಬ್ಬ ಯಹೂದಿಯಿದ್ದಾನೆ. ಅವನನ್ನು ಕೊಲ್ಲು" ಎಂದು ಹೇಳುವ ತನಕ ಪ್ರಳಯವು ಸಂಭವಿಸುವುದಿಲ್ಲ." Sahih/Authentic. - Al-Bukhari and Muslim
explain-icon

ವಿವರಣೆ

ಮುಸಲ್ಮಾನರು ಯಹೂದಿಗಳೊಡನೆ ಯುದ್ಧ ಮಾಡುವ ತನಕ ಪ್ರಳಯ ಸಂಭವಿಸುವುದಿಲ್ಲ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದಾರೆ. ಎಲ್ಲಿಯವರೆಗೆಂದರೆ ಒಬ್ಬ ಯಹೂದಿ ಯುದ್ಧದಿಂದ ಪಲಾಯನ ಮಾಡಿ ಒಂದು ಬಂಡೆಯ ಹಿಂದೆ ಅಡಗಿ ಕುಳಿತರೆ, ಅಲ್ಲಾಹು ಆ ಬಂಡೆಗೆ ಮಾತನಾಡುವ ಶಕ್ತಿಯನ್ನು ನೀಡಿ ಅದು ಮುಸಲ್ಮಾನನನ್ನು ಕೂಗಿ ಕರೆದು ತನ್ನ ಹಿಂದೆ ಒಬ್ಬ ಯಹೂದಿಯಿದ್ದಾನೆ ಎಂದು ಹೇಳುವವರೆಗೆ ಮತ್ತು ಆ ಮುಸಲ್ಮಾನನು ಅವನನ್ನು ಕೊಲ್ಲುವವರೆಗೆ ಪ್ರಳಯವು ಸಂಭವಿಸುವುದಿಲ್ಲ.

explain-icon

ಹದೀಸಿನ ಪ್ರಯೋಜನಗಳು

  • ಸರ್ವಶಕ್ತನಾದ ಅಲ್ಲಾಹು ತಿಳಿಸಿಕೊಟ್ಟಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿಸಿದ್ದಾರೆ. ಅವರು ಹೇಳಿದಂತೆಯೇ ಅವು ಸಂಭವಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ.
  • ಅಂತ್ಯಕಾಲದಲ್ಲಿ ಮುಸಲ್ಮಾನರು ಯಹೂದಿಗಳೊಡನೆ ಯುದ್ಧ ಮಾಡುತ್ತಾರೆ ಮತ್ತು ಅದು ಪ್ರಳಯದ ಚಿಹ್ನೆಗಳಲ್ಲಿ ಒಂದಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.
  • ಇಸ್ಲಾಂ ಧರ್ಮವು ಪುನರುತ್ಥಾನ ದಿನದ ತನಕ ಉಳಿಯುತ್ತದೆ ಮತ್ತು ಇತರ ಎಲ್ಲ ಧರ್ಮಗಳ ಮೇಲೆ ಜಯ ಗಳಿಸುತ್ತದೆ ಎಂದು ಈ ಹದೀಸ್ ತಿಳಿಸುತ್ತದೆ.
  • ಅಲ್ಲಾಹು ಮುಸಲ್ಮಾನರಿಗೆ ಅವರ ಶತ್ರುಗಳ ವಿರುದ್ಧ ಸಹಾಯ ಮಾಡುತ್ತಾನೆ ಎಂದು ಈ ಹದೀಸ್ ತಿಳಿಸುತ್ತದೆ. ಅಂತ್ಯಕಾಲದಲ್ಲಿ ಬಂಡೆಗಳು ಮಾತನಾಡುವುದು ಇಂತಹ ಒಂದು ಸಹಾಯವಾಗಿದೆ.
explain-icon

ವರ್ಗಗಳು

explain-icon

ಇನ್ನಷ್ಟು