ಹಗಲು-ರಾತ್ರಿಯಲ್ಲಿ ಕಡ್ಡಾಯವಾಗಿರುವ ಐದು ವೇಳೆಯ ನಮಾಝ್‌ಗಳು, ಪ್ರತಿ ಶುಕ್ರವಾರ ನಿರ್ವಹಿಸುವ ಜುಮುಅ ನಮಾಝ್, ಪ್ರತಿ ವರ್ಷ ರಮದಾನ್ ತಿಂಗಳಲ್ಲಿ ಆಚರಿಸುವ ಉಪವಾಸಗಳು, ಅವುಗಳ ನಡುವೆ ಸಂಭವಿಸುವ ಕಿರುಪಾಪಗಳಿಗೆ ಪರಿಹಾರವಾಗಿದೆ. ಆದರೆ ಮಹಾಪಾಪಗಳಿಂದ ದೂರವಿರುವವರಿಗೆ ಮಾತ್ರ. ವ್ಯಭಿಚಾರ, ಮದ್ಯಪಾನ ಮುಂತಾದ ಮಹಾಪಾಪಗಳು ಪಶ್ಚಾತ್ತಾಪದಿಂದಲ್ಲದೆ ಪರಿಹಾರವಾಗುವುದಿಲ್ಲ.