ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಜನರು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜ್ಯೋತಿಷ್ಯರ ಬಗ್ಗೆ ಕೇಳಿದಾಗ, ಅವರು ಉತ್ತರಿಸಿದರು: "ಅವರು ಏನೂ ಅಲ್ಲ." ಜನರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಕೆಲವೊಮ್ಮೆ ಅವರು ಹೇಳುವ ಮಾತುಗಳು ಸತ್ಯವಾಗುತ್ತದೆಯಲ್ಲವೇ?" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವರು ಹೇಳಿದ ಆ ಮಾತು ಮಾತ್ರ ಸತ್ಯವಾಗಿದೆ. ಜಿನ್ನ್‌ಗಳು ಆ ಮಾತನ್ನು (ಆಕಾಶದಿಂದ) ಕಸಿದುಕೊಂಡು ಅವರ ಗೆಳೆಯರ (ಜ್ಯೋತಿಷಿಗಳ) ಕಿವಿಯಲ್ಲಿ ಕೋಳಿ ಕುಕ್ಕುವಂತೆ ಸದ್ದುಮಾಡುತ್ತಾ ಪಿಸುಗುಡುತ್ತಾರೆ. ಅವರು (ಜ್ಯೋತಿಷಿಗಳು) ಅದಕ್ಕೆ ನೂರಕ್ಕಿಂತಲೂ ಹೆಚ್ಚು ಸುಳ್ಳುಗಳನ್ನು ಬೆರೆಸುತ್ತಾರೆ." Sahih/Authentic. - Al-Bukhari
explain-icon

ವಿವರಣೆ

ಭವಿಷ್ಯದಲ್ಲಿ ನಡೆಯುವ ಸಂಗತಿಗಳನ್ನು ಹೇಳುವವರ ಬಗ್ಗೆ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾದಾಗ, ಅವರು ಹೇಳಿದರು: ಅವರ ಕಡೆಗೆ ಗಮನ ನೀಡಬೇಡಿ. ಅವರ ಮಾತುಗಳನ್ನು ಸ್ವೀಕರಿಸಬೇಡಿ. ಅವರಿಗೆ ಯಾವುದೇ ಪ್ರಾಮುಖ್ಯತೆಯಿಲ್ಲ. ಜನರು ಹೇಳಿದರು: ಆದರೆ ಕೆಲವೊಮ್ಮೆ ಅವರು ಹೇಳಿದ ಮಾತು ಸತ್ಯವಾಗುತ್ತದೆಯಲ್ಲವೇ. ಇಂತಿಂತಹ ತಿಂಗಳ ಇಂತಿಂತಹ ದಿನದಲ್ಲಿ ಇಂತಿಂತಹ ಘಟನೆ ಸಂಭವಿಸುತ್ತದೆಯೆಂದು ಅವರು ಹೇಳಿದರೆ ಅವರು ಹೇಳಿದಂತೆ ಅದು ಸಂಭವಿಸುತ್ತದೆಯಲ್ಲವೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಜಿನ್ನ್‌ಗಳು (ಯಕ್ಷ) ಆಕಾಶದಲ್ಲಿ ನಡೆಯುವ ಸಂಗತಿಗಳನ್ನು ಕದ್ದಾಲಿಸುತ್ತಾರೆ. ನಂತರ ಅಲ್ಲಿಂದ ಇಳಿದು, ತಮ್ಮ ಗೆಳೆಯರಾದ ಜ್ಯೋತಿಷಿಗಳ ಬಳಿಗೆ ಬಂದು ತಾವು ಆಲಿಸಿದ್ದನ್ನು ಅವರಿಗೆ ತಿಳಿಸುತ್ತಾರೆ. ಆಕಾಶದಿಂದ ಕದ್ದು ಕೇಳಿದ ಈ ಸತ್ಯಕ್ಕೆ ಜ್ಯೋತಿಷಿಗಳು ನೂರು ಸುಳ್ಳುಗಳನ್ನು ಬೆರೆಸುತ್ತಾರೆ.

explain-icon

ಹದೀಸಿನ ಪ್ರಯೋಜನಗಳು

  • ಜ್ಯೋತಿಷಿಗಳ ಮಾತುಗಳನ್ನು ನಂಬಬಾರದು, ಅವರು ಹೇಳುವುದೆಲ್ಲವೂ ಸುಳ್ಳು ಮತ್ತು ಊಹೆಗಳು ಮಾತ್ರ ಎಂದು ಈ ಹದೀಸ್ ತಿಳಿಸುತ್ತದೆ. ಕೆಲವೊಮ್ಮೆ ಅವರು ಹೇಳಿದ್ದು ಸತ್ಯವಾದರೂ ಸಹ.
  • ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಯೋಗದ ನಂತರ ಆಕಾಶವನ್ನು ಭದ್ರಪಡಿಸಲಾಗಿದೆ. ಆದ್ದರಿಂದ ಶೈತಾನರಿಗೆ ದೇವವಾಣಿಯನ್ನು ಅಥವಾ ಇತರ ಮಾತುಗಳನ್ನು ಕದ್ದಾಲಿಸಲು ಸಾಧ್ಯವಾಗುವುದಿಲ್ಲ. ಅವರೇನಾದರೂ ಕದ್ದಾಲಿಸಲು ಪ್ರಯತ್ನಿಸಿದರೆ ಉಲ್ಕೆಗಳನ್ನು ಎಸೆದು ಅವರನ್ನು ಓಡಿಸಲಾಗುತ್ತದೆ.
  • ಜಿನ್ನ್‌ಗಳಿಗೆ ಮನುಷ್ಯರಲ್ಲಿ ಸೇರಿದ ಗೆಳೆಯರಿದ್ದಾರೆ ಎಂದು ಈ ಹದೀಸ್ ತಿಳಿಸುತ್ತದೆ.
explain-icon

ವರ್ಗಗಳು

explain-icon

ಇನ್ನಷ್ಟು