ಎಲ್ಲವೂ ವಿಧಿ ನಿರ್ಣಯದಂತೆ ನಡೆಯುತ್ತದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಾರೆ. ನಿಶಕ್ತಿಯೂ ಕೂಡ. ನಿಶಕ್ತಿಯೆಂದರೆ ಕಡ್ಡಾಯವಾಗಿರುವುದನ್ನು ಮಾಡದಿರುವುದು, ಅದನ್ನು ಮುಂದೂಡುವುದು, ಅಥವಾ ಅದರ ನಿಶ್ಚಿತ ಸಮಯದ ಬಳಿಕ ನಿರ್ವಹಿಸುವುದು. ಇಹಲೋಕ ಮತ್ತು ಪರಲೋಕಕ್ಕೆ ಸಂಬಂಧಿಸಿದ ವಿಷಯಗಳೆಲ್ಲವೂ ಇದರಲ್ಲಿ ಒಳಪಡುತ್ತವೆ. ಅದೇ ರೀತಿ ಉತ್ಸಾಹವು ಕೂಡ. ಉತ್ಸಾಹ ಎಂದರೆ ಇಹಲೋಕ ಮತ್ತು ಪರಲೋಕಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಆವೇಶ ಮತ್ತು ಪರಿಣತಿ ಹೊಂದಿರುವುದು. ಸರ್ವಶಕ್ತನಾದ ಅಲ್ಲಾಹು ನಿಶಕ್ತಿ, ಉತ್ಸಾಹ ಮುಂತಾದ ಎಲ್ಲವನ್ನು ನಿರ್ಣಯಿಸಿದ್ದಾನೆ. ಅಲ್ಲಾಹನ ಜ್ಞಾನ ಮತ್ತು ಇಚ್ಛೆಯಲ್ಲಿರುವುದಲ್ಲದೆ ಜಗತ್ತಿನಲ್ಲಿ ಬೇರೇನೂ ಸಂಭವಿಸುವುದಿಲ್ಲ.