ಜರೀರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಯಾರು ಇತರರಿಗೆ ದಯೆ ತೋರುವುದಿಲ್ಲವೋ ಅವರಿಗೆ ಸರ್ವಶಕ್ತನಾದ ಅಲ್ಲಾಹು ದಯೆ ತೋರುವುದಿಲ್ಲ.” Sahih/Authentic. - Al-Bukhari and Muslim
explain-icon

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರು ಮನುಷ್ಯರಿಗೆ ದಯೆ ತೋರುವುದಿಲ್ಲವೋ ಅವರಿಗೆ ಸರ್ವಶಕ್ತನಾದ ಅಲ್ಲಾಹು ದಯೆ ತೋರುವುದಿಲ್ಲ. ಅಲ್ಲಾಹನ ದಯೆಯನ್ನು ಪಡೆಯುವ ಅತಿದೊಡ್ಡ ಮಾರ್ಗವು ಸಹಜೀವಿಗಳಿಗೆ ದಯೆ ತೋರುವುದಾಗಿದೆ.

explain-icon

ಹದೀಸಿನ ಪ್ರಯೋಜನಗಳು

  • ಎಲ್ಲಾ ಜೀವಿಗಳಿಗೂ ದಯೆಯ ಅಗತ್ಯವಿದೆ. ಆದರೆ ಇಲ್ಲಿ ವಿಶೇಷವಾಗಿ ಮನುಷ್ಯರ ಬಗ್ಗೆ ಹೇಳಿದ್ದು ಅವರಿಗೆ ಪ್ರಾಮುಖ್ಯತೆ ನೀಡುವುದಕ್ಕಾಗಿದೆ.
  • ಅಲ್ಲಾಹು ದಯಾಳುವಾಗಿದ್ದಾನೆ. ದಯೆ ತೋರುವ ಅವನ ದಾಸರಿಗೆ ಅವನು ದಯೆ ತೋರುತ್ತಾನೆ. ಪ್ರತಿಫಲವು ಕರ್ಮದ ಅದೇ ವರ್ಗಕ್ಕೆ ಸೇರಿರುತ್ತದೆ.
  • ಜನರಿಗೆ ದಯೆ ತೋರುವುದು ಎಂದರೆ ಅವರಿಗೆ ಒಳಿತು ಮಾಡುವುದು, ಅವರಿಗೆ ತೊಂದರೆಯಾಗದಂತೆ ನೋಡುವುದು ಮತ್ತು ಅವರೊಡನೆ ಅತ್ಯುತ್ತಮವಾಗಿ ವ್ಯವಹರಿಸುವುದು.
explain-icon

ವರ್ಗಗಳು

explain-icon

ಇನ್ನಷ್ಟು