ಮನೆಗಳಲ್ಲಿ ನಮಾಝ್ ಮಾಡದಿರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ವಿರೋಧಿಸುತ್ತಾರೆ. ಏಕೆಂದರೆ ಮನೆಯಲ್ಲಿ ನಮಾಝ್ ಮಾಡದಿದ್ದರೆ ಅದು ಸಮಾಧಿಯಾಗಿ ಮಾರ್ಪಡುತ್ತದೆ. ಸಮಾಧಿಯು ನಮಾಝ್ ಮಾಡುವ ಸ್ಥಳವಲ್ಲ. ತಮ್ಮ ಸಮಾಧಿಗೆ ಪದೇ ಪದೇ ಭೇಟಿ ನೀಡುವುದನ್ನು ಮತ್ತು ರೂಢಿಯಾಗಿ ಅಲ್ಲಿ ಒಟ್ಟುಗೂಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ. ಏಕೆಂದರೆ ಅದು ಬಹುದೇವಾರಾಧನೆಗೆ ಕಾರಣವಾಗುವ ಸಾಧ್ಯತೆಯಿದೆ. ಅವರ ಮೇಲೆ ಸ್ವಲಾತ್ ಮತ್ತು ಸಲಾಂ ಹೇಳಲು ಆದೇಶಿಸಿದ್ದಾರೆ. ಅದನ್ನು ಭೂಮಿಯ ಯಾವುದೇ ಭಾಗದಿಂದ ಹೇಳಬಹುದು. ಹತ್ತಿರದಿಂದ ಹೇಳಿದರೂ, ದೂರದಿಂದ ಹೇಳಿದರೂ ಅದು ಅವರಿಗೆ ತಲುಪುತ್ತದೆ. ಸಲಾಂ ಹೇಳುವುದಕ್ಕಾಗಿ ಪದೇ ಪದೇ ಅವರ ಸಮಾಧಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ.