ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕದರ್‌ನ ರಾತ್ರಿಯ ಶ್ರೇಷ್ಠತೆಯನ್ನು ತಿಳಿಸುತ್ತಾರೆ. ಅದು ರಮದಾನ್ ತಿಂಗಳ ಕೊನೆಯ ಹತ್ತರಲ್ಲಿ ಬರುತ್ತದೆ. ಯಾರು ಆ ರಾತ್ರಿಯಲ್ಲಿ ವಿಶ್ವಾಸವಿಟ್ಟು, ಅದರ ಶ್ರೇಷ್ಠತೆಯಲ್ಲಿ ನಂಬಿಕೆಯಿಟ್ಟು, ಯಾವುದೇ ತೋರಿಕೆ ಅಥವಾ ಪ್ರಶಂಸೆಯನ್ನು ಬಯಸದೆ ಕೇವಲ ಅಲ್ಲಾಹನ ಪ್ರತಿಫಲವನ್ನು ಮಾತ್ರ ಅಪೇಕ್ಷಿಸುತ್ತಾ, ಆ ರಾತ್ರಿಯಲ್ಲಿ ನಮಾಝ್, ಪ್ರಾರ್ಥನೆ, ಕುರ್‌ಆನ್ ಪಠಣ, ಅಲ್ಲಾಹನ ಸ್ಮರಣೆ, ಮುಂತಾದ ಆರಾಧನಾ ಕರ್ಮಗಳಲ್ಲಿ ಪರಿಶ್ರಮಿಸುತ್ತಾರೋ, ಅವರ ಹಿಂದಿನ ಪಾಪಗಳೆಲ್ಲವನ್ನೂ ಕ್ಷಮಿಸಲಾಗುತ್ತದೆ.