ತನ್ನ ಎರಡು ದವಡೆಗಳ ನಡುವೆ ಮತ್ತು ತನ್ನ ಎರಡು ಕಾಲುಗಳ ನಡುವೆ ಇರುವುದನ್ನು ನಿಯಂತ್ರಿಸುತ್ತೇನೆಂದು ಯಾರು ನನಗೆ ಖಾತ್ರಿ ನೀಡುತ್ತಾನೋ, ಅವನಿಗೆ ನಾನು ಸ್ವರ್ಗದ ಖಾತ್ರಿ ನೀಡುತ್ತೇನೆ...

ಸಹ್ಲ್ ಬಿನ್ ಸಅದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ತನ್ನ ಎರಡು ದವಡೆಗಳ ನಡುವೆ ಮತ್ತು ತನ್ನ ಎರಡು ಕಾಲುಗಳ ನಡುವೆ ಇರುವುದನ್ನು ನಿಯಂತ್ರಿಸುತ್ತೇನೆಂದು ಯಾರು ನನಗೆ ಖಾತ್ರಿ ನೀಡುತ್ತಾನೋ, ಅವನಿಗೆ ನಾನು ಸ್ವರ್ಗದ ಖಾತ್ರಿ ನೀಡುತ್ತೇನೆ."
Sahih/Authentic. - Al-Bukhari

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಎರಡು ವಿಷಯಗಳನ್ನು ತಿಳಿಸುತ್ತಿದ್ದಾರೆ. ಮುಸಲ್ಮಾನನು ಅವೆರಡನ್ನು ಸರಿಯಾಗಿ ಉಪಯೋಗಿಸಿದರೆ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ. ಮೊದಲನೆಯದು: ಸರ್ವಶಕ್ತನಾದ ಅಲ್ಲಾಹು ಕೋಪಗೊಳ್ಳುವಂತಹ ಮಾತುಗಳನ್ನು ಆಡದಂತೆ ನಾಲಿಗೆಯನ್ನು ಹದ್ದುಬಸ್ತಿನಲ್ಲಿಡುವುದು. ಎರಡನೆಯದು: ಅಶ್ಲೀಲ ಕೃತ್ಯಗಳಲ್ಲಿ ತೊಡಗದಂತೆ ಗುಪ್ತಾಂಗವನ್ನು ಹದ್ದುಬಸ್ತಿನಲ್ಲಿಡುವುದು. ಏಕೆಂದರೆ, ಪಾಪಗಳು ಹೆಚ್ಚಾಗಿ ಈ ಎರಡು ಅಂಗಗಳಿಂದಲೇ ಸಂಭವಿಸುತ್ತವೆ.

  1. ನಾಲಿಗೆ ಮತ್ತು ಗುಪ್ತಾಂಗವನ್ನು ಹದ್ದುಬಸ್ತಿನಲ್ಲಿಡುವುದು ಸ್ವರ್ಗ ಪ್ರವೇಶಕ್ಕೆ ದಾರಿಯಾಗಿದೆ.
  2. ಇಲ್ಲಿ ನಿರ್ದಿಷ್ಟವಾಗಿ ನಾಲಿಗೆ ಮತ್ತು ಗುಪ್ತಾಂಗದ ಬಗ್ಗೆ ಹೇಳಲಾಗಿದೆ. ಏಕೆಂದರೆ ಇಹಲೋಕ ಮತ್ತು ಪರಲೋಕದಲ್ಲಿ ಜನರು ಅತಿಹೆಚ್ಚು ಪರೀಕ್ಷೆಗಳನ್ನು ಎದುರಿಸಬೇಕಾಗಿ ಬರುವುದು ಇವೆರಡರಿಂದಲೇ ಆಗಿದೆ.

ಯಶಸ್ವಿಯಾಗಿ ರವಾನಿಸಲಾಗಿದೆ!