ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ತನ್ನ ಸತ್ಯವಿಶ್ವಾಸಿ ದಾಸರಲ್ಲಿ ಯಾರಿಗಾದರೂ ಒಳಿತನ್ನು ಬಯಸಿದರೆ, ಅವರನ್ನು ಅವರ ದೇಹದಲ್ಲಿ, ಆಸ್ತಿಯಲ್ಲಿ ಅಥವಾ ಕುಟುಂಬದಲ್ಲಿ ಪರೀಕ್ಷಿಸುತ್ತಾನೆ. ಈ ಪರೀಕ್ಷೆಗಳು ಸತ್ಯವಿಶ್ವಾಸಿಯು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾ ಅವನ ಕಡೆಗೆ ಮರಳಲು, ಅವನ ಪಾಪಗಳು ಪರಿಹಾರವಾಗಲು ಮತ್ತು ಅವನ ಪದವಿಗಳು ಉನ್ನತವಾಗಲು ಕಾರಣವಾಗುತ್ತವೆ.