ವಿದ್ವಾಂಸರ ನಡುವೆ ಮೆರೆಯಲು, ಅಥವಾ ಅವಿವೇಕಿಗಳೊಡನೆ ತರ್ಕಿಸಲು, ಅಥವಾ ಸಭೆಗಳಲ್ಲಿ ಶ್ರೇಷ್ಠ ಸ್ಥಾನಮಾನ ಪಡೆಯಲು ಜ್ಞಾನವನ್ನು ಕಲಿಯಬೇಡಿ...

ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ವಿದ್ವಾಂಸರ ನಡುವೆ ಮೆರೆಯಲು, ಅಥವಾ ಅವಿವೇಕಿಗಳೊಡನೆ ತರ್ಕಿಸಲು, ಅಥವಾ ಸಭೆಗಳಲ್ಲಿ ಶ್ರೇಷ್ಠ ಸ್ಥಾನಮಾನ ಪಡೆಯಲು ಜ್ಞಾನವನ್ನು ಕಲಿಯಬೇಡಿ. ಈ ಉದ್ದೇಶಗಳಿಗಾಗಿ ಕಲಿಯುವವನಿಗೆ ನರಕವೇ ಗತಿ, ನರಕವೇ ಗತಿ."
Sahih/Authentic. - Ibn Maajah

ವಿದ್ವಾಂಸರ ನಡುವೆ ನಾನು ಕೂಡ ನಿಮ್ಮಂತೆ ಒಬ್ಬ ವಿದ್ವಾಂಸ ಎಂದು ತೋರಿಸುವುದಕ್ಕಾಗಿ ಮತ್ತು ಜಂಬಪಡುವುದಕ್ಕಾಗಿ, ಅಥವಾ ಅವಿವೇಕಿಗಳೊಡನೆ ಮತ್ತು ಅಜ್ಞಾನಿಗಳೊಡನೆ ಸಂಭಾಷಣೆ ಮಾಡಿ ತರ್ಕಿಸುವುದಕ್ಕಾಗಿ, ಅಥವಾ ಸಭೆಗಳಲ್ಲಿ ಗೌರವ ಸ್ಥಾನವನ್ನು ಮತ್ತು ಪ್ರಥಮ ಆದ್ಯತೆಯನ್ನು ಪಡೆಯುವುದಕ್ಕಾಗಿ ಜ್ಞಾನ ಸಂಪಾದಿಸಬಾರದು ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಸುತ್ತಿದ್ದಾರೆ. ಯಾರು ಈ ಉದ್ದೇಶಗಳಿಗಾಗಿ ಜ್ಞಾನವನ್ನು ಕಲಿಯುತ್ತಾರೋ, ಅವರು ನರಕಕ್ಕೆ ಅರ್ಹರಾಗುತ್ತಾರೆ. ಏಕೆಂದರೆ, ಅವರು ಜ್ಞಾನ ಕಲಿತದ್ದು (ಅಲ್ಲಾಹನ ಸಂಪ್ರೀತಿಗಲ್ಲ; ಬದಲಿಗೆ) ತೋರಿಕೆಗಾಗಿದೆ. ಜ್ಞಾನ ಕಲಿಯುವುದರಲ್ಲಿ ಅವರಿಗೆ ಯಾವುದೇ ನಿಷ್ಕಳಂಕತೆಯಿಲ್ಲ.

  1. ಮೆರೆಯುವುದು, ತರ್ಕಿಸುವುದು, ಸಭೆಗಳಲ್ಲಿ ಗೌರವ ಸ್ಥಾನ ಪಡೆಯುವುದು ಮುಂತಾದ ಉದ್ದೇಶಗಳಿಗಾಗಿ ಜ್ಞಾನವನ್ನು ಕಲಿಯುವವನಿಗೆ ನರಕ ಕಟ್ಟಿಟ್ಟ ಬುತ್ತಿ ಎಂಬ ಬೆದರಿಕೆಯು ಈ ಹದೀಸಿನಲ್ಲಿದೆ.
  2. ಜ್ಞಾನವನ್ನು ಕಲಿಯುವಾಗ ಮತ್ತು ಕಲಿಸುವಾಗ ಉದ್ದೇಶವನ್ನು ನಿಷ್ಕಳಂಕಗೊಳಿಸುವುದರ ಪ್ರಾಮುಖ್ಯತೆಯನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.
  3. ಉದ್ದೇಶವು ಕರ್ಮಗಳ ಅಡಿಪಾಯವಾಗಿದೆ. ಅದರ ಆಧಾರದಲ್ಲೇ ಪ್ರತಿಫಲ ನೀಡಲಾಗುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!