ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾನು ಎಲ್ಲಾ ಪಾಪಗಳನ್ನು ಮತ್ತು ದೋಷಗಳನ್ನು ಮಾಡಿದ್ದೇನೆ. ಚಿಕ್ಕ ಮತ್ತು ದೊಡ್ಡ ಪಾಪಗಳಲ್ಲಿ ಯಾವುದನ್ನು ನಾನು ಮಾಡದೆ ಬಿಟ್ಟಿಲ್ಲ. ನನಗೆ ಕ್ಷಮೆ ಸಿಗಬಹುದೇ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳುತ್ತಾರೆ: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ನೀನು ಸಾಕ್ಷಿ ವಹಿಸುವುದಿಲ್ಲವೇ?" ಅವರು ಇದನ್ನು ಮೂರು ಬಾರಿ ಕೇಳಿದರು. ಆಗ ಆ ವ್ಯಕ್ತಿ: "ಹೌದು, ನಾನು ಸಾಕ್ಷಿ ವಹಿಸುತ್ತೇನೆ" ಎಂದು ಉತ್ತರಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸಾಕ್ಷಿ ವಚನಗಳ ಶ್ರೇಷ್ಠತೆಯನ್ನು ಮತ್ತು ಅದು ಪಾಪಗಳನ್ನು ಪರಿಹರಿಸುತ್ತದೆ ಎಂದು ತಿಳಿಸಿದರು. ಹಾಗೆಯೇ ಪಶ್ಚಾತಾಪವು ಅದರ ಮುಂಚಿನ ಪಾಪಗಳನ್ನು ಅಳಿಸುತ್ತದೆ ಎಂದರು.