ಇಹಲೋಕದಲ್ಲಿ ಅವನನ್ನು ಅವನ ಕಾಲುಗಳ ಮೇಲೆ ನಡೆಯುವಂತೆ ಮಾಡಿದವನಿಗೆ ಪುನರುತ್ಥಾನ ದಿನದಂದು ಅವನನ್ನು ಅವನ ಮುಖದ ಮೇಲೆ ನಡೆಯುವಂತೆ ಮಾಡುವ ಸಾಮರ್ಥ್ಯವಿಲ್ಲವೇ?...

ಕತಾದ (ಅಲ್ಲಾಹು ಅವರಿಗೆ ಕರುಣೆ ತೋರಲಿ) ರಿಂದ ವರದಿ. ಅವರು ಹೇಳಿದರು: ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಮಗೆ ತಿಳಿಸಿದರು: ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹನ ಪ್ರವಾದಿಯವರೇ! ಸತ್ಯನಿಷೇಧಿಯನ್ನು ಅವನ ಮುಖದ ಮೇಲೆ ಒಟ್ಟುಗೂಡಿಸುವುದು ಹೇಗೆ?" ಅವರು ಉತ್ತರಿಸಿದರು: "ಇಹಲೋಕದಲ್ಲಿ ಅವನನ್ನು ಅವನ ಕಾಲುಗಳ ಮೇಲೆ ನಡೆಯುವಂತೆ ಮಾಡಿದವನಿಗೆ ಪುನರುತ್ಥಾನ ದಿನದಂದು ಅವನನ್ನು ಅವನ ಮುಖದ ಮೇಲೆ ನಡೆಯುವಂತೆ ಮಾಡುವ ಸಾಮರ್ಥ್ಯವಿಲ್ಲವೇ?" ಕತಾದ ಹೇಳುತ್ತಾರೆ: "ಖಂಡಿತ ಸಾಮರ್ಥ್ಯವಿದೆ. ನಮ್ಮ ಪರಿಪಾಲಕನ (ಅಲ್ಲಾಹನ) ಪ್ರತಿಷ್ಠೆಯ ಮೇಲಾಣೆ!"
Sahih/Authentic. - Al-Bukhari and Muslim

ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು: "ಪುನರುತ್ಥಾನ ದಿನದಂದು ಸತ್ಯನಿಷೇಧಿಯನ್ನು ಅವನ ಮುಖದ ಮೇಲೆ ಒಟ್ಟುಗೂಡಿಸುವುದು ಹೇಗೆ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಇಹಲೋಕದಲ್ಲಿ ಅವನನ್ನು ಅವನ ಕಾಲುಗಳ ಮೇಲೆ ನಡೆಯುವಂತೆ ಮಾಡಿದವನಿಗೆ ಪುನರುತ್ಥಾನ ದಿನದಂದು ಅವನನ್ನು ಅವನ ಮುಖದ ಮೇಲೆ ನಡೆಯುವಂತೆ ಮಾಡುವ ಸಾಮರ್ಥ್ಯವಿಲ್ಲವೇ?" ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

  1. ಪುನರುತ್ಥಾನ ದಿನದಂದು ಸತ್ಯ ನಿಷೇಧಿಗೆ ಉಂಟಾಗುವ ಅಪಮಾನವನ್ನು ಮತ್ತು ಅವನು ಮುಖದ ಮೇಲೆ ನಡೆಯುವನು ಎಂದು ಈ ಹದೀಸ್ ತಿಳಿಸುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!