ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರಳಯವು ಹತ್ತಿರವಾಗುತ್ತಿರುವ ಚಿಹ್ನೆಗಳನ್ನು ವಿವರಿಸಿದ್ದಾರೆ. ಆಗ ವಿದ್ವಾಂಸರ ಮರಣದಿಂದಾಗಿ ಧಾರ್ಮಿಕ ಜ್ಞಾನವನ್ನು ಎತ್ತಲಾಗುತ್ತದೆ. ಇದರ ಪರಿಣಾಮವಾಗಿ ಅಜ್ಞಾನವು ಹೆಚ್ಚಾಗಿ ವ್ಯಾಪಕವಾಗಿ ಹರಡಿಕೊಳ್ಳುತ್ತದೆ, ವ್ಯಭಿಚಾರ ಮತ್ತು ಅಶ್ಲೀಲತೆಗಳು ವ್ಯಾಪಕವಾಗುತ್ತವೆ, ಮಧ್ಯಪಾನ ಹೆಚ್ಚಾಗುತ್ತದೆ, ಪುರುಷರ ಸಂಖ್ಯೆ ಕಡಿಮೆಯಾಗಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತದೆ. ಎಲ್ಲಿಯವರೆಗೆಂದರೆ ಐವತ್ತು ಮಹಿಳೆಯರ ಉಸ್ತುವಾರಿ ಮತ್ತು ಯೋಗಕ್ಷೇಮ ನೋಡಿಕೊಳ್ಳಲು ಒಬ್ಬ ಪುರುಷ ಮಾತ್ರ ಇರುತ್ತಾನೆ.