ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರಾರ್ಥಿಸುವುದೇನೆಂದರೆ, ಮುಸಲ್ಮಾನರ ಮೇಲೆ ಅಧಿಕಾರವಿರುವವರು, ಅದು ಎಷ್ಟೇ ಚಿಕ್ಕ ಅಥವಾ ಎಷ್ಟೇ ದೊಡ್ಡ ಅಧಿಕಾರವಾಗಿದ್ದರೂ, ಅದು ಪೂರ್ಣ ರೂಪದ ಅಥವಾ ಆಂಶಿಕ ಅಧಿಕಾರವಾಗಿದ್ದರೂ, ಅವರು ಮುಸ್ಲಿಮರೊಡನೆ ಮೃದುವಾಗಿ ವರ್ತಿಸದೆ ಕಠಿಣವಾಗಿ ವರ್ತಿಸಿದರೆ, ಅವರು ಮಾಡಿದಂತೆಯೇ ಅಲ್ಲಾಹು ಕೂಡ ಅವರೊಡನೆ ಕಠಿಣವಾಗಿ ವರ್ತಿಸುತ್ತಾನೆ. ಆದರೆ ಅವರು ಅವರೊಡನೆ ಮೃದುವಾಗಿ ವರ್ತಿಸಿ, ಅವರಿಗೆ ಅವರ ಕಾರ್ಯಗಳನ್ನು ಸುಲಭಗೊಳಿಸಿದರೆ, ಅಲ್ಲಾಹು ಕೂಡ ಅವರೊಡನೆ ಮೃದುವಾಗಿ ವರ್ತಿಸಿ, ಅವರಿಗೆ ಅವರ ಕಾರ್ಯಗಳನ್ನು ಸುಲಭಗೊಳಿಸುತ್ತಾನೆ.