ಸರ್ವಶಕ್ತನಾದ ಅಲ್ಲಾಹು ತನ್ನ ಕೆಲವು ದಾಸರನ್ನು ಪ್ರೀತಿಸುತ್ತಾನೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ ಅವನು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ: ದೇವಭಯವುಳ್ಳವರು ಎಂದರೆ ಅವನ ಆಜ್ಞೆಗಳನ್ನು ಪಾಲಿಸುವವರು ಮತ್ತು ಅವನು ವಿರೋಧಿಸಿದ ವಿಷಯಗಳಿಂದ ದೂರ ಸರಿಯುವವರು. ಅವನು ಸ್ವಾವಲಂಬಿಯನ್ನು ಪ್ರೀತಿಸುತ್ತಾನೆ: ಸ್ವಾವಲಂಬಿ ಎಂದರೆ ಜನರನ್ನು ಅವಲಂಬಿಸದೆ ಕೇವಲ ಅಲ್ಲಾಹನನ್ನು ಮಾತ್ರ ಅವಲಂಬಿಸಿ, ಅಗತ್ಯಕ್ಕಾಗಿ ಅವನ ಹೊರತು ಇತರ ಯಾರ ಕಡೆಗೂ ತಿರುಗದವನು. ಅವನು ಗಮನ ಸೆಳೆಯಲು ಬಯಸದವನನ್ನು ಪ್ರೀತಿಸುತ್ತಾನೆ: ಗಮನ ಸೆಳೆಯಲು ಬಯಸದವನು ಎಂದರೆ ವಿನಮ್ರನು, ಅಲ್ಲಾಹನನ್ನು ಆರಾಧಿಸುವವನು, ತನಗೆ ಪ್ರಯೋಜನ ನೀಡುವ ಕಾರ್ಯಗಳನ್ನು ಮಾತ್ರ ಮಾಡುವವನು, ಇತರರು ತನ್ನನ್ನು ಗುರುತಿಸಬೇಕು, ಪ್ರಶಂಸಿಸಬೇಕು ಮತ್ತು ತನ್ನ ಬಗ್ಗೆ ಮಾತನಾಡಬೇಕು ಎಂದು ಬಯಸದವನು.