ಅಲ್ಲಾಹು ಜನರ ಪೈಕಿ ಅತಿಯಾಗಿ ದ್ವೇಷಿಸುವುದು ಮಹಾ ಜಗಳಗಂಟನನ್ನಾಗಿದೆ

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಜನರ ಪೈಕಿ ಅತಿಯಾಗಿ ದ್ವೇಷಿಸುವುದು ಮಹಾ ಜಗಳಗಂಟನನ್ನಾಗಿದೆ."
Sahih/Authentic. - Al-Bukhari and Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಜನರ ಪೈಕಿ ತೀವ್ರವಾಗಿ ಮತ್ತು ಅತಿಯಾಗಿ ತರ್ಕ ಮಾಡುವವನನ್ನು ಅತಿಯಾಗಿ ದ್ವೇಷಿಸುತ್ತಾನೆ. ಅಂದರೆ, ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧನಾಗದ ಮತ್ತು ತರ್ಕಿಸುತ್ತಲೇ ತನ್ನನ್ನು ಸಮರ್ಥಿಸಿಕೊಳ್ಳುವವನನ್ನು. ಒಂದು ವೇಳೆ ಅವನು ಸತ್ಯದ ಪರವಾಗಿ ತರ್ಕಿಸುವುದಾದರೂ ಅವನು ತರ್ಕದಲ್ಲಿ ಮಿತಿಮೀರಿ ನ್ಯಾಯದ ಮಿತಿಯನ್ನು ದಾಟುತ್ತಾನೆ ಮತ್ತು ಅಜ್ಞಾನದಿಂದ ತರ್ಕಿಸತೊಡಗುತ್ತಾನೆ.

  1. ಅನ್ಯಾಯಕ್ಕೊಳಗಾದ ವ್ಯಕ್ತಿ ಕಾನೂನು ಪ್ರಕ್ರಿಯೆಗಳ ಮೂಲಕ ತನ್ನ ಹಕ್ಕನ್ನು ಮರಳಿ ಪಡೆಯಲು ತರ್ಕಿಸುವುದು ಖಂಡನೀಯ ತರ್ಕಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ.
  2. ತರ್ಕಗಳು ಮತ್ತು ಜಗಳಗಳು ನಾಲಿಗೆಯ ಪಿಡುಗುಗಳಾಗಿದ್ದು, ಮುಸ್ಲಿಮರಲ್ಲಿ ವಿಭಜನೆ ಮತ್ತು ಭಿನ್ನಾಭಿಪ್ರಾಯವನ್ನು ಉಂಟುಮಾಡುತ್ತವೆ.
  3. ತರ್ಕವು ಸತ್ಯದ ಪರವಾಗಿದ್ದು ಉತ್ತಮ ರೀತಿಯಲ್ಲಿದ್ದರೆ ಅದು ಶ್ಲಾಘನೀಯವಾಗಿದೆ. ಆದರೆ ಅದು ಸತ್ಯವನ್ನು ತಿರಸ್ಕರಿಸಲು ಮತ್ತು ಸುಳ್ಳನ್ನು ಸ್ಥಾಪಿಸಲು ಇರುವುದಾದರೆ, ಅಥವಾ ಅದು ಪುರಾವೆ ಮತ್ತು ಸಾಕ್ಷಿ ರಹಿತವಾಗಿದ್ದರೆ ಅದು ಖಂಡನೀಯವಾಗಿದೆ.

ಯಶಸ್ವಿಯಾಗಿ ರವಾನಿಸಲಾಗಿದೆ!