“ಕುಸ್ತಿಯಲ್ಲಿ ಗೆಲ್ಲುವವನು ಬಲಶಾಲಿಯಲ್ಲ. ಕೋಪ ಬರುವಾಗ ಮನಸ್ಸನ್ನು ನಿಗ್ರಹಿಸುವವನೇ (ನಿಜವಾದ) ಬಲಶಾಲಿ.”

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಕುಸ್ತಿಯಲ್ಲಿ ಗೆಲ್ಲುವವನು ಬಲಶಾಲಿಯಲ್ಲ. ಕೋಪ ಬರುವಾಗ ಮನಸ್ಸನ್ನು ನಿಗ್ರಹಿಸುವವನೇ (ನಿಜವಾದ) ಬಲಶಾಲಿ.”
Sahih/Authentic. - Al-Bukhari and Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ನಿಜವಾದ ಶಕ್ತಿಯು ದೇಹದ ಶಕ್ತಿಯಲ್ಲ ಅಥವಾ ಬಲಶಾಲಿಗಳು ಕುಸ್ತಿಯಲ್ಲಿ ಇನ್ನೊಬ್ಬರನ್ನು ಬೀಳಿಸುವ ಶಕ್ತಿಯಲ್ಲ. ಬದಲಿಗೆ, ತನ್ನ ದೇಹದ ವಿರುದ್ಧ ಹೋರಾಡುವ ಮತ್ತು ಕೋಪ ಬರುವಾಗ ಅದನ್ನು ನಿಗ್ರಹಿಸುವವನೇ ನಿಜವಾದ ಶಕ್ತಿಶಾಲಿ. ಏಕೆಂದರೆ ಅವನಿಗೆ ಮನಸ್ಸಿನ ಮೇಲಿರುವ ನಿಯಂತ್ರಣವನ್ನು ಮತ್ತು ಶೈತಾನನ ಮೇಲಿರುವ ಹತೋಟಿಯನ್ನು ಇದು ಸೂಚಿಸುತ್ತದೆ.

  1. ಸಹಿಷ್ಣುತೆ ತೋರುವುದರ ಮತ್ತು ಕೋಪ ಬರುವಾಗ ಮನಸ್ಸನ್ನು ನಿಯಂತ್ರಿಸುವುದರ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ. ಇದು ಇಸ್ಲಾಂ ಪ್ರೋತ್ಸಾಹಿಸಿದ ಒಳಿತಿನ ಕಾರ್ಯಗಳಲ್ಲಿ ಒಂದಾಗಿದೆ.
  2. ಕೋಪ ಬರುವಾಗ ತನ್ನ ಮನಸ್ಸಿನ ವಿರುದ್ಧ ಹೋರಾಡುವುದು ಶತ್ರುಗಳ ವಿರುದ್ಧ ಹೋರಾಡುವುದಕ್ಕಿಂತ ಹೆಚ್ಚು ಕಠೋರವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  3. ಅಜ್ಞಾನಕಾಲದ ಶಕ್ತಿಯ ಕಲ್ಪನೆಯನ್ನು ಇಸ್ಲಾಂ ಧರ್ಮವು ಉತ್ತಮ ಗುಣನಡವಳಿಕೆಗೆ ಬದಲಾಯಿಸಿತು. ಏಕೆಂದರೆ, ಇಸ್ಲಾಂ ಧರ್ಮದ ಪ್ರಕಾರ ತನ್ನ ಮನಸ್ಸಿನ ಮೇಲೆ ನಿಯಂತ್ರಣವಿರುವವನೇ ಮಹಾ ಶಕ್ತಿಶಾಲಿ.
  4. ಕೋಪದಿಂದ ದೂರವಿರಬೇಕೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ವ್ಯಕ್ತಿಗೆ ಮತ್ತು ಸಮಾಜಕ್ಕೆ ಹಾನಿ ಉಂಟುಮಾಡುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!