“ಸಿವಾಕ್ (ಹಲ್ಲುಜ್ಜುವುದು) ಬಾಯಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅಲ್ಲಾಹನನ್ನು ಸಂಪ್ರೀತಗೊಳಿಸುತ್ತದೆ.”...

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸಿವಾಕ್ (ಹಲ್ಲುಜ್ಜುವುದು) ಬಾಯಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅಲ್ಲಾಹನನ್ನು ಸಂಪ್ರೀತಗೊಳಿಸುತ್ತದೆ.”
Sahih/Authentic. - An-Nasaa’i

ಅರಾಕ್ ಕಡ್ಡಿ ಮುಂತಾದವುಗಳಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವುದರಿಂದ ಬಾಯಿಯು ಹೊಲಸು ಮತ್ತು ದುರ್ನಾತವಿಲ್ಲದೆ ಶುದ್ಧವಾಗಿರುತ್ತದೆ, ಮತ್ತು ಅದರಿಂದ ಅಲ್ಲಾಹು ದಾಸನ ಬಗ್ಗೆ ಸಂಪ್ರೀತನಾಗುತ್ತಾನೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ತಿಳಿಸುತ್ತಾರೆ. ಏಕೆಂದರೆ, ಅದು ಅಲ್ಲಾಹನಿಗೆ ವಿಧೇಯತೆ ತೋರುವುದು ಮತ್ತು ಅವನ ಆಜ್ಞಾಪಾಲನೆ ಮಾಡುವುದಾಗಿದೆ. ಮಾತ್ರವಲ್ಲದೆ, ಅದರಿಂದ ಅಲ್ಲಾಹು ಇಷ್ಟಪಡುವ ಸ್ವಚ್ಛತೆಯೂ ಉಂಟಾಗುತ್ತದೆ.

  1. ಹಲ್ಲುಜ್ಜುವುದರ ಶ್ರೇಷ್ಠತೆಯನ್ನು ಮತ್ತು ಹೆಚ್ಚು ಹೆಚ್ಚು ಹಲ್ಲುಜ್ಜಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯಕ್ಕೆ ಪ್ರೇರೇಪಿಸಿರುವುದನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.
  2. ಅರಾಕ್ ಮರದ ಕಡ್ಡಿಯನ್ನು ಬಳಸಿ ಹಲ್ಲುಜ್ಜುವುದು ಶ್ರೇಷ್ಠವಾಗಿದೆ. ಟೂತ್ ಬ್ರಶ್ ಬಳಸಿದರೂ ತೊಂದರೆ ಇಲ್ಲ.

ಯಶಸ್ವಿಯಾಗಿ ರವಾನಿಸಲಾಗಿದೆ!