ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಹೊಸ ಬಟ್ಟೆಯನ್ನು ಬಹಳ ಸಮಯದವರೆಗೆ ಬಳಸಿದರೆ ಅದು ಹಳತಾಗುವಂತೆ ಮುಸಲ್ಮಾನನ ಹೃದಯದಲ್ಲಿರುವ ವಿಶ್ವಾಸವು ಕೂಡ ಹಳತಾಗುತ್ತದೆ ಮತ್ತು ದುರ್ಬಲವಾಗುತ್ತದೆ. ಆರಾಧನೆಗಳಲ್ಲಿ ನಿಷ್ಠೆ ಇಲ್ಲದಿರುವುದು, ಪಾಪಗಳನ್ನು ಮಾಡುವುದು ಮತ್ತು ಮೋಜು ಮಸ್ತಿಗಳಲ್ಲಿ ಮುಳುಗುವುದು ಇದಕ್ಕೆ ಕಾರಣವಾಗಿದೆ. ಆದ್ದರಿಂದ, ಕಡ್ಡಾಯ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವುದರ ಮತ್ತು ಅಲ್ಲಾಹನ ಸ್ಮರಣೆ ಹಾಗೂ ಅವನಲ್ಲಿ ಕ್ಷಮೆ ಬೇಡುವುದನ್ನು ಹೆಚ್ಚಿಸುವುದರ ಜೊತೆಗೆ, ನಮ್ಮ ವಿಶ್ವಾಸವನ್ನು ನವೀಕರಿಸಲು ನಾವು ಅಲ್ಲಾಹನೊಂದಿಗೆ ನಿರಂತರ ಬೇಡಿಕೊಳ್ಳಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ನಿರ್ದೇಶಿಸುತ್ತಾರೆ.