ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯಂತ ಪರಿಪೂರ್ಣವಾದ ನಡವಳಿಕೆಯನ್ನು ಹೊಂದಿದ್ದರು. ಉತ್ತಮ ರೀತಿಯಲ್ಲಿ ಮಾತನಾಡುವುದು, ಜನರಿಗೆ ಒಳಿತು ಮಾಡುವುದು, ಮಂದಹಾಸ ಬೀರುವುದು, ಜನರಿಗೆ ತೊಂದರೆ ಕೊಡದಿರುವುದು, ಜನರಿಂದ ಉಂಟಾಗುವ ತೊಂದರೆಗಳನ್ನು ಸಹಿಸುವುದು ಮುಂತಾದ ಎಲ್ಲಾ ಉತ್ತಮ ನಡವಳಿಕೆಗಳಲ್ಲೂ ಅವರು ಮುಂಚೂಣಿಯಲ್ಲಿದ್ದರು.