ಒಬ್ಬ ವ್ಯಕ್ತಿ ಅಲ್ಲಾಹನಿಂದ ಪ್ರತಿಫಲವನ್ನು ಅಪೇಕ್ಷಿಸುತ್ತಾ ತನ್ನ ಕುಟುಂಬಕ್ಕೆ ಖರ್ಚು ಮಾಡುವುದೆಲ್ಲವೂ ದಾನವಾಗಿವೆ...

ಅಬೂ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ವ್ಯಕ್ತಿ ಅಲ್ಲಾಹನಿಂದ ಪ್ರತಿಫಲವನ್ನು ಅಪೇಕ್ಷಿಸುತ್ತಾ ತನ್ನ ಕುಟುಂಬಕ್ಕೆ ಖರ್ಚು ಮಾಡುವುದೆಲ್ಲವೂ ದಾನವಾಗಿವೆ."
Sahih/Authentic. - Al-Bukhari and Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ತನ್ನ ಪೋಷಣೆಯಲ್ಲಿರುವ ಪತ್ನಿ, ತಂದೆ-ತಾಯಿ, ಮಕ್ಕಳು ಮುಂತಾದವರಿಗೆ ಹಣವನ್ನು ಖರ್ಚು ಮಾಡುವಾಗ, ಅದರ ಮೂಲಕ ಅಲ್ಲಾಹನ ಸಾಮೀಪ್ಯ ಮತ್ತು ಅವನ ಪ್ರತಿಫಲವನ್ನು ಬಯಸುವುದಾದರೆ, ಅವನಿಗೆ ಆ ಹಣವನ್ನು ದಾನ ಮಾಡಿದ ಪ್ರತಿಫಲವಿದೆ.

  1. ಕುಟುಂಬಕ್ಕೆ ಖರ್ಚು ಮಾಡಿದರೂ ಪ್ರತಿಫಲ ಮತ್ತು ಪುಣ್ಯವಿದೆಯೆಂದು ಈ ಹದೀಸ್ ತಿಳಿಸುತ್ತದೆ.
  2. ಸತ್ಯವಿಶ್ವಾಸಿಯು ತನ್ನ ಕರ್ಮದ ಮೂಲಕ ಅಲ್ಲಾಹನ ಸಂಪ್ರೀತಿ ಮತ್ತು ಪ್ರತಿಫಲವನ್ನು ಬಯಸಬೇಕೆಂದು ಈ ಹದೀಸ್ ತಿಳಿಸುತ್ತದೆ.
  3. ಕುಟುಂಬಕ್ಕೆ ಖರ್ಚು ಮಾಡುವುದು ಸೇರಿದಂತೆ, ಯಾವುದೇ ಕೆಲಸ ಮಾಡುವಾಗಲೂ ಮನಸ್ಸಿನಲ್ಲಿ ಉದ್ದೇಶವನ್ನು (ನಿಯ್ಯತ್) ನಿರ್ಧರಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!