ಅಬೂ ಹಯ್ಯಾಜ್ ಅಸದಿ‌ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲೀ ಬಿನ್ ಅಬೂ ತಾಲಿಬ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ನನ್ನೊಂದಿಗೆ ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಕಳುಹಿಸಿದ ಅದೇ ಕೆಲಸಕ್ಕಾಗಿ ನಾನು ತಮ್ಮನ್ನು ಕಳುಹಿಸಲೇ? ತಾವು ಒಂದೇ ಒಂದು ಪ್ರತಿಮೆಯನ್ನು ಅಳಿಸದೆ ಬಿಡಬಾರದು ಮತ್ತು ಎತ್ತರಿಸಲ್ಪಟ್ಟ ಒಂದೇ ಒಂದು ಸಮಾಧಿಯನ್ನು ನೆಲಸಮ ಮಾಡದೆ ಬಿಡಬಾರದು."
Sahih/Authentic. - Muslim

ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಂಗಡಿಗರಿಗೆ (ಸಹಾಬಿಗಳಿಗೆ) ಆದೇಶಿಸುವುದೇನೆಂದರೆ, ಯಾವುದೇ ಪ್ರತಿಮೆಯನ್ನು — ಅಂದರೆ ಆತ್ಮವಿರುವ ಜೀವಿಯ ಮೂರ್ತ ಅಥವಾ ಅಮೂರ್ತ ರೂಪ — ತೊಲಗಿಸದೆ ಅಥವಾ ಅಳಿಸಿಹಾಕದೆ ಬಿಡಬಾರದು. ಅದೇ ರೀತಿ, ಎತ್ತರಿಸಿ ಕಟ್ಟಲಾಗಿರುವ ಸಮಾಧಿಯನ್ನು ನೆಲಸಮಗೊಳಿಸದೆ ಮತ್ತು ಅದರ ಮೇಲೆ ಕಟ್ಟಲಾಗಿರುವುದನ್ನು ದ್ವಂಸಗೊಳಿಸದೆ ಬಿಡಬಾರದು; ಅಥವಾ ಸಮಾಧಿಯು ಭೂಮಿಯಿಂದ ಒಂದು ಗೇಣು ಮಾತ್ರ ಎತ್ತರವಾಗಿರುವಂತೆ ಮಾಡಬೇಕು.

  1. ಜೀವವಿರುವ ವಸ್ತುವಿನ ಚಿತ್ರವನ್ನು ರಚಿಸುವುದು ನಿಷಿದ್ಧವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಬಹುದೇವಾರಾಧನೆಗೆ ಕಾರಣವಾಗುತ್ತದೆ.
  2. ಅಧಿಕಾರವಿರುವವನು ಅಥವಾ ಸಾಮರ್ಥ್ಯವಿರುವವನು ಕೆಡುಕನ್ನು ಕೈಯಿಂದ ನಿವಾರಿಸುವುದು ಧರ್ಮನಿಯಮವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  3. ಅಜ್ಞಾನಕಾಲದ ಅವಶೇಷಗಳಾದ ಚಿತ್ರಗಳು, ಪ್ರತಿಮೆಗಳು ಮತ್ತು ಸಮಾಧಿಗಳ ಮೇಲಿರುವ ಕಟ್ಟಡಗಳನ್ನು ತೊಲಗಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ಸಾಹ ತೋರುತ್ತಿದ್ದರೆಂದು ಈ ಹದೀಸ್ ತಿಳಿಸುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!