ಬಹಿರಂಗವಾಗಿ ಕುರ್‌ಆನ್ ಪಠಿಸುವವನು ಬಹಿರಂಗವಾಗಿ ದಾನ ಮಾಡುವವನಂತೆ. ರಹಸ್ಯವಾಗಿ ಕುರ್‌ಆನ್ ಪಠಿಸುವವನು ರಹಸ್ಯವಾಗಿ ದಾನಮಾಡುವವನಂತೆ...

ಉಕ್ಬ ಬಿನ್ ಆಮಿರ್ ಜುಹನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬಹಿರಂಗವಾಗಿ ಕುರ್‌ಆನ್ ಪಠಿಸುವವನು ಬಹಿರಂಗವಾಗಿ ದಾನ ಮಾಡುವವನಂತೆ. ರಹಸ್ಯವಾಗಿ ಕುರ್‌ಆನ್ ಪಠಿಸುವವನು ರಹಸ್ಯವಾಗಿ ದಾನಮಾಡುವವನಂತೆ."
Sahih/Authentic. - Abu Dawood

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಎಲ್ಲರ ಮುಂದೆ ಬಹಿರಂಗವಾಗಿ ಕುರ್‌ಆನ್ ಪಠಿಸುವವನು ಎಲ್ಲರ ಮುಂದೆ ಬಹಿರಂಗವಾಗಿ ದಾನ ಮಾಡುವವನಿಗೆ ಸಮ. ಯಾರಿಗೂ ತಿಳಿಯದಂತೆ ರಹಸ್ಯವಾಗಿ ಕುರ್‌ಆನ್ ಪಠಿಸುವವನು ಯಾರಿಗೂ ತಿಳಿಯದಂತೆ ರಹಸ್ಯವಾಗಿ ದಾನ ಮಾಡುವವನಿಗೆ ಸಮ.

  1. ರಹಸ್ಯವಾಗಿ ದಾನ ಮಾಡುವುದು ಶ್ರೇಷ್ಠವಾಗಿರುವಂತೆ ರಹಸ್ಯವಾಗಿ ಕುರ್‌ಆನ್ ಪಠಿಸುವುದು ಶ್ರೇಷ್ಠವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ರಹಸ್ಯವಾಗಿ ಕುರ್‌ಆನ್ ಪಠಿಸುವಾಗ ನಿಷ್ಕಳಂಕತೆ ಇರುತ್ತದೆ; ತೋರಿಕೆ ಮತ್ತು ಆತ್ಮಪುಳಕ ಇರುವುದಿಲ್ಲ. ಆದರೆ ಕುರ್‌ಆನ್ ಕಲಿಸುವುದು ಮುಂತಾದ ಅಗತ್ಯ ಸಂದರ್ಭಗಳಲ್ಲಿ ಬಹಿರಂಗವಾಗಿ ಕುರ್‌ಆನ್ ಪಠಿಸುವುದರಲ್ಲಿ ತೊಂದರೆಯಿಲ್ಲ.

ಯಶಸ್ವಿಯಾಗಿ ರವಾನಿಸಲಾಗಿದೆ!