ಮಹಿಳೆಯರಿಗಿಂತಲೂ ಹೆಚ್ಚು ಹಾನಿ ಮಾಡುವ ಒಂದು ಪರೀಕ್ಷೆಯನ್ನು ನಾನು ನನ್ನ ನಂತರ ಪುರುಷರಿಗೆ ಬಿಟ್ಟು ಹೋಗುವುದಿಲ್ಲ...

ಉಸಾಮ ಬಿನ್ ಝೈದ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮಹಿಳೆಯರಿಗಿಂತಲೂ ಹೆಚ್ಚು ಹಾನಿ ಮಾಡುವ ಒಂದು ಪರೀಕ್ಷೆಯನ್ನು ನಾನು ನನ್ನ ನಂತರ ಪುರುಷರಿಗೆ ಬಿಟ್ಟು ಹೋಗುವುದಿಲ್ಲ."
Sahih/Authentic. - Al-Bukhari and Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರು ಅವರ ಮರಣಾನಂತರ ಮಹಿಳೆಯರಿಗಿಂತಲೂ ಹೆಚ್ಚು ಹಾನಿ ಮಾಡುವ ಒಂದು ಪರೀಕ್ಷೆಯನ್ನು ಒಬ್ಬ ಪುರುಷನಿಗೆ ಬಿಟ್ಟು ಹೋಗುವುದಿಲ್ಲ. ಆ ಮಹಿಳೆ ಅವನ ಹೆಂಡತಿಯಾಗಿದ್ದರೆ ಧರ್ಮಕ್ಕೆ ವಿರುದ್ಧವಾದ ರೀತಿಯಲ್ಲಿ ಅವಳನ್ನು ಅನುಸರಿಸುವ ಮೂಲಕ ಅವನು ಈ ಪರೀಕ್ಷೆಯನ್ನು ಎದುರಿಸುತ್ತಾನೆ. ಆಕೆ ಅನ್ಯ ಮಹಿಳೆಯಾಗಿದ್ದರೆ ಅವಳೊಂದಿಗೆ ಬೆರೆಯುವ, ಅಥವಾ ಅವಳೊಂದಿಗೆ ಏಕಾಂತದಲ್ಲಿರುವಾಗ ಮತ್ತು ಅದರಿಂದ ಉಂಟಾಗುವ ಕೆಟ್ಟ ಸಂಗತಿಗಳ ಮೂಲಕ ಅವನು ಈ ಪರೀಕ್ಷೆಯನ್ನು ಎದುರಿಸುತ್ತಾನೆ.

  1. ಮುಸಲ್ಮಾನನು ಮಹಿಳೆಯರ ಪರೀಕ್ಷೆಯ ಬಗ್ಗೆ ಎಚ್ಚರವಹಿಸಬೇಕು ಮತ್ತು ಆ ಪರೀಕ್ಷೆಗೆ ಕಾರಣವಾಗುವ ಎಲ್ಲಾ ಮಾರ್ಗಗಳಿಂದ ದೂರವಿರಬೇಕೆಂದು ಈ ಹದೀಸ್ ತಿಳಿಸುತ್ತದೆ.
  2. ಸತ್ಯವಿಶ್ವಾಸಿ ಅಲ್ಲಾಹನ ಪಾಶವನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು ಮತ್ತು ಪರೀಕ್ಷೆಗಳಿಂದ ಸುರಕ್ಷಿತನಾಗಲು ಅವನ ಮೊರೆಹೋಗಬೇಕೆಂದು ಈ ಹದೀಸ್ ತಿಳಿಸುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!