ಯಾರು ತನ್ನ ಸಹೋದರನ ಘನತೆಯನ್ನು ಕಾಪಾಡುತ್ತಾನೋ, ಅವನ ಮುಖವನ್ನು ಪುನರುತ್ಥಾನ ದಿನದಂದು ಅಲ್ಲಾಹು ನರಕದಿಂದ ಕಾಪಾಡುತ್ತಾನೆ...

ಅಬೂ ದರ್ದಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ತನ್ನ ಸಹೋದರನ ಘನತೆಯನ್ನು ಕಾಪಾಡುತ್ತಾನೋ, ಅವನ ಮುಖವನ್ನು ಪುನರುತ್ಥಾನ ದಿನದಂದು ಅಲ್ಲಾಹು ನರಕದಿಂದ ಕಾಪಾಡುತ್ತಾನೆ."
Sahih/Authentic. - At-Tirmidhi

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ತನ್ನ ಮುಸಲ್ಮಾನ ಸಹೋದರನ ಬಗ್ಗೆ ಯಾರಾದರೂ ದೂಷಣೆ ಮಾಡುವುದನ್ನು ಕೇಳುವಾಗ, ಆ ದೂಷಣೆಯನ್ನು ಅಥವಾ ಕೆಟ್ಟ ಮಾತುಗಳನ್ನು ತಡೆಯುವ ಮೂಲಕ ಯಾರು ಅವನ ಘನತೆಯನ್ನು ಕಾಪಾಡುತ್ತಾನೋ, ಅವನನ್ನು ಪುನರುತ್ಥಾನ ದಿನದಂದು ಅಲ್ಲಾಹು ನರಕದ ಶಿಕ್ಷೆಯಿಂದ ಕಾಪಾಡುತ್ತಾನೆ.

  1. ಮುಸಲ್ಮಾನರ ಘನತೆಗೆ ಚ್ಯುತಿ ತರುವ ಮಾತುಗಳನ್ನು ಆಡುವುದನ್ನು ಈ ಹದೀಸ್ ವಿರೋಧಿಸುತ್ತದೆ.
  2. ಪ್ರತಿಫಲವು ಕರ್ಮದ ಅದೇ ವರ್ಗಕ್ಕೆ ಸೇರಿರುತ್ತದೆ، ಯಾರು ತನ್ನ ಸಹೋದರನ ಘನತೆಯನ್ನು ಕಾಪಾಡುತ್ತಾನೋ, ಅವನನ್ನು ಅಲ್ಲಾಹು ನರಕದಿಂದ ಕಾಪಾಡುತ್ತಾನೆ.
  3. ಇಸ್ಲಾಂ ಧರ್ಮವು ಅದರ ಅನುಯಾಯಿಗಳ ನಡುವೆ ಸಹೋದರತೆ ಮತ್ತು ಸಹಾಯ-ಸಹಕಾರಗಳನ್ನು ಪ್ರೋತ್ಸಾಹಿಸುವ ಧರ್ಮವಾಗಿದೆ.

ಯಶಸ್ವಿಯಾಗಿ ರವಾನಿಸಲಾಗಿದೆ!