“ಕುಟುಂಬ ಸಂಬಂಧ ಕಡಿಯುವವನು ಸ್ವರ್ಗವನ್ನು ಪ್ರವೇಶಿಸುವುದಿಲ್ಲ.”

ಜುಬೈರ್ ಬಿನ್ ಮುತ್‌ಇಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಕುಟುಂಬ ಸಂಬಂಧ ಕಡಿಯುವವನು ಸ್ವರ್ಗವನ್ನು ಪ್ರವೇಶಿಸುವುದಿಲ್ಲ.”
Sahih/Authentic. - Al-Bukhari and Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಕಡ್ಡಾಯವಾಗಿ ನೆರವೇರಿಸಬೇಕಾದ ಕುಟುಂಬ ಸಂಬಂಧಿಕರ ಹಕ್ಕುಗಳನ್ನು ಯಾರು ಕಡಿಯುತ್ತಾರೋ, ಅಥವಾ ಅವರಿಗೆ ತೊಂದರೆ ಕೊಡುತ್ತಾರೋ ಮತ್ತು ಅವರೊಡನೆ ಕೆಟ್ಟದಾಗಿ ವರ್ತಿಸುತ್ತಾರೋ ಅವರಿಗೆ ಸ್ವರ್ಗವನ್ನು ಪ್ರವೇಶಿಸುವ ಯಾವುದೇ ಅರ್ಹತೆಯಿಲ್ಲ.

  1. ಕುಟುಂಬ ಸಂಬಂಧಗಳನ್ನು ಕಡಿದುಕೊಳ್ಳುವುದು ಮಹಾಪಾಪವಾಗಿದೆ.
  2. ಕುಟುಂಬ ಸಂಬಂಧವು ವಾಡಿಕೆಗೆ ಅನುಗುಣವಾಗಿದ್ದು, ಸ್ಥಳ, ಕಾಲ ಮತ್ತು ವ್ಯಕ್ತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ.
  3. ಕುಟುಂಬ ಸಂಬಂಧಗಳ ಜೋಡಣೆಯು ಕುಟುಂಬಿಕರನ್ನು ಭೇಟಿಯಾಗುವುದು, ಅವರಿಗೆ ದಾನ ಮಾಡುವುದು, ಅವರಿಗೆ ಉಪಕಾರ ಮಾಡುವುದು, ಅವರು ಅನಾರೋಗ್ಯದಲ್ಲಿದ್ದರೆ ಸಂದರ್ಶಿಸುವುದು, ಅವರಿಗೆ ಒಳಿತನ್ನು ಬೋಧಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು ಮುಂತಾದವುಗಳಿಂದ ಸಾಧ್ಯವಾಗುತ್ತದೆ.
  4. ಕಡಿಯುವ ಸಂಬಂಧಗಳು ಎಷ್ಟರಮಟ್ಟಿಗೆ ಹತ್ತಿರವಾಗಿರುತ್ತದೋ ಅಷ್ಟರಮಟ್ಟಿಗೆ ಪಾಪದ ತೀವ್ರತೆಯು ಹೆಚ್ಚಾಗುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!