ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒಳಿತಿನ ಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸಿದ್ದಾರೆ ಮತ್ತು ಅದರಲ್ಲಿ ಯಾವುದನ್ನೂ ಕೀಳಾಗಿ ಕಾಣಬಾರದು; ಅದೊಂದು ಚಿಕ್ಕ ಸಂಗತಿಯಾಗಿದ್ದರೂ ಸಹ ಎಂದು ಹೇಳಿದ್ದಾರೆ. ಭೇಟಿಯಾಗುವಾಗ ಮುಖದಲ್ಲಿ ಮುಗುಳ್ನಗೆ ಬೀರುವುದು ಒಂದು ಚಿಕ್ಕ ಒಳಿತಿನ ಕಾರ್ಯವಾಗಿದೆ. ಮುಸಲ್ಮಾನರು ಇದರಲ್ಲಿ ಉತ್ಸಾಹ ತೋರಬೇಕು. ಏಕೆಂದರೆ ಇದರಿಂದ ಮುಸಲ್ಮಾನರ ನಡುವೆ ಅನ್ಯೋನ್ಯತೆ ಹೆಚ್ಚಾಗುತ್ತದೆ ಮತ್ತು ಅವರ ಮನಸ್ಸಿಗೆ ಸಂತೋಷವನ್ನು ನೀಡಿದಂತಾಗುತ್ತದೆ.