“ದಾನ ಮಾಡಿದ ಕಾರಣ ಯಾವುದೇ ಆಸ್ತಿ ಕಡಿಮೆಯಾಗಿಲ್ಲ. (ಇತರರನ್ನು) ಮನ್ನಿಸುವ ಗುಣವಿರುವ ದಾಸನಿಗೆ ಅಲ್ಲಾಹು ಗೌರವವನ್ನಲ್ಲದೆ ಬೇರೇನನ್ನೂ ಹೆಚ್ಚಿಸಿಲ್ಲ. ಯಾರು ಅಲ್ಲಾಹನಿಗಾಗಿ ವಿನಯ ತೋರುತ್ತಾನೋ ಅವನನ್ನು ಅಲ್ಲಾಹು ಉನ್ನತಿಗೇರಿಸದೇ ಇರಲಾರ.”...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ದಾನ ಮಾಡಿದ ಕಾರಣ ಯಾವುದೇ ಆಸ್ತಿ ಕಡಿಮೆಯಾಗಿಲ್ಲ. (ಇತರರನ್ನು) ಮನ್ನಿಸುವ ಗುಣವಿರುವ ದಾಸನಿಗೆ ಅಲ್ಲಾಹು ಗೌರವವನ್ನಲ್ಲದೆ ಬೇರೇನನ್ನೂ ಹೆಚ್ಚಿಸಿಲ್ಲ. ಯಾರು ಅಲ್ಲಾಹನಿಗಾಗಿ ವಿನಯ ತೋರುತ್ತಾನೋ ಅವನನ್ನು ಅಲ್ಲಾಹು ಉನ್ನತಿಗೇರಿಸದೇ ಇರಲಾರ.”
Sahih/Authentic. - Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ದಾನಧರ್ಮವು ಆಸ್ತಿಯನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ, ಮನುಷ್ಯನಿಗೆ ಬರುವ ವಿಪತ್ತುಗಳನ್ನು ಅದು ತಡೆಯುತ್ತದೆ. ದಾನ ಮಾಡುವ ವ್ಯಕ್ತಿಗೆ ಅಲ್ಲಾಹು ಮಹಾ ಪ್ರತಿಫಲವನ್ನು ನೀಡುತ್ತಾನೆ. ದಾನ ಮಾಡುವುದರಿಂದ ಲಾಭವಾಗುತ್ತದೆಯೇ ವಿನಾ ನಷ್ಟವಾಗುವುದಿಲ್ಲ. ಪ್ರತೀಕಾರ ಪಡೆಯುವ ಅಥವಾ ಶಿಕ್ಷಿಸುವ ಸಾಮರ್ಥ್ಯವಿದ್ದೂ ಸಹ ಕ್ಷಮಾಗುಣವನ್ನು ಪ್ರದರ್ಶಿಸುವ ವ್ಯಕ್ತಿಗೆ ಅದು ಶಕ್ತಿ ಮತ್ತು ಪ್ರತಿಷ್ಟೆಯನ್ನು ಹೆಚ್ಚಿಸಿಕೊಡುತ್ತದೆ. ಇತರರ ಭಯದಿಂದ, ಅವರನ್ನು ಸಂತೋಷಪಡಿಸುವ ಉದ್ದೇಶದಿಂದ, ಅಥವಾ ಅವರಿಂದ ಏನಾದರೂ ಲಾಭ ಪಡೆಯುವುದಕ್ಕಾಗಿಯಲ್ಲದೆ ಕೇವಲ ಅಲ್ಲಾಹನ ಸಂಪ್ರೀತಿ ಮಾತ್ರ ಬಯಸಿ ಯಾರು ವಿನಯ ತೋರುತ್ತಾರೋ ಅದರ ಪ್ರತಿಫಲವಾಗಿ ಅವರಿಗೆ ಉನ್ನತ ಸ್ಥಾನಮಾನ ಮತ್ತು ಶ್ರೇಷ್ಠತೆ ದೊರಕದೆ ಇರಲಾರದು.

  1. ಒಳಿತು ಮತ್ತು ಯಶಸ್ಸು ಧರ್ಮ ನಿಯಮಗಳನ್ನು ಅನುಸರಿಸುವುದರಲ್ಲಿ ಮತ್ತು ಸತ್ಕರ್ಮ ಮಾಡುವುದರಲ್ಲಿದೆಯೆಂದು ಈ ಹದೀಸ್ ತಿಳಿಸುತ್ತದೆ. ಜನರಲ್ಲಿ ಕೆಲವರು ಅದಕ್ಕೆ ವಿರುದ್ಧವಾಗಿ ಭಾವಿಸಿದರೂ ಸಹ.

ಯಶಸ್ವಿಯಾಗಿ ರವಾನಿಸಲಾಗಿದೆ!