“ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಏಕೆಂದರೆ ಅವರು ತಮ್ಮ ಕರ್ಮಗಳೊಂದಿಗೆ ತೆರಳಿದ್ದಾರೆ.”

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಏಕೆಂದರೆ ಅವರು ತಮ್ಮ ಕರ್ಮಗಳೊಂದಿಗೆ ತೆರಳಿದ್ದಾರೆ.”
Sahih/Authentic. - Al-Bukhari

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಮತ್ತು ಅವರ ಗೌರವಕ್ಕೆ ಕಳಂಕ ತರುವುದು ನಿಷಿದ್ಧವೆಂದು ತಿಳಿಸುತ್ತಿದ್ದಾರೆ. ಇದು ಬಹಳ ಕೆಟ್ಟ ಗುಣವಾಗಿದೆ. ಏಕೆಂದರೆ, ಅವರು ಮಾಡಿದ ಒಳಿತು ಅಥವಾ ಕೆಡುಕುಗಳೊಂದಿಗೆ ಅವರು ಹೊರಟು ಹೋಗಿದ್ದಾರೆ. ಅದೇ ರೀತಿ, ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದರಿಂದ ತೊಂದರೆಯಿರುವುದು ಅವರಿಗಲ್ಲ; ಬದಲಿಗೆ ಬದುಕಿರುವವರಿಗಾಗಿದೆ.

  1. ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಿಷೇಧಿಸಲಾಗಿದೆ ಎಂಬುದಕ್ಕೆ ಈ ಹದೀಸ್ ಪುರಾವೆಯಾಗಿದೆ.
  2. ಬದುಕಿರುವವರ ಒಳಿತಿನ ದೃಷ್ಟಿಯಿಂದ ಮತ್ತು ಜಗಳ ಹಾಗೂ ದ್ವೇಷದಿಂದ ಸಮಾಜದ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡುವುನ್ನು ನಿಲ್ಲಿಸಬೇಕಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  3. ಮರಣಹೊಂದಿದವರ ಬಗ್ಗೆ ಏಕೆ ಕೆಟ್ಟದಾಗಿ ಮಾತನಾಡಬಾರದು ಎಂಬುದಕ್ಕೆ ಕಾರಣವೇನೆಂದರೆ, ಅವರು ಈಗಾಗಲೇ ತಮ್ಮ ಕರ್ಮಗಳೊಂದಿಗೆ ತೆರಳಿದ್ದು, ಅವರನ್ನು ದೂಷಿಸುವುದರಿಂದ ಯಾರಿಗೂ ಪ್ರಯೋಜನವಿಲ್ಲ; ಬದಲಿಗೆ, ಅದರಿಂದ ಜೀವಂತವಿರುವ ಅವರ ಸಂಬಂಧಿಕರಿಗೆ ತೊಂದರೆಯಾಗುತ್ತದೆ.
  4. ಯಾವುದೇ ಹಿತವಿಲ್ಲದ ಮಾತುಗಳನ್ನಾಡುವುದು ಮುಸಲ್ಮಾನನಿಗೆ ಭೂಷಣವಲ್ಲ ಎಂದು ಈ ಹದೀಸ್ ತಿಳಿಸುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!