ಆಹಾರವನ್ನು ಸೇವಿಸಿ ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಮತ್ತು ಪಾನೀಯವನ್ನು ಸೇವಿಸಿ ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ದಾಸನನ್ನು ಅಲ್ಲಾಹು ಪ್ರೀತಿಸುತ್ತಾನೆ...

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಆಹಾರವನ್ನು ಸೇವಿಸಿ ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಮತ್ತು ಪಾನೀಯವನ್ನು ಸೇವಿಸಿ ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ದಾಸನನ್ನು ಅಲ್ಲಾಹು ಪ್ರೀತಿಸುತ್ತಾನೆ."
Sahih/Authentic. - Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ದಾಸನು ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸಲು ಅಲ್ಲಾಹನನ್ನು ಸ್ತುತಿಸುವುದು ಅಲ್ಲಾಹನ ಸಂಪ್ರೀತಿಯನ್ನು ಪಡೆಯುವ ಮಾರ್ಗಗಳಲ್ಲಿ ಒಂದಾಗಿದೆ. ಆದ್ದರಿಂದ ದಾಸನು ಆಹಾರ ಸೇವಿಸಿದರೆ ಅಲ್‌ಹಮ್ದುಲಿಲ್ಲಾಹ್ ಎಂದು ಹೇಳಬೇಕು ಮತ್ತು ಪಾನೀಯವನ್ನು ಸೇವಿಸಿದರೆ ಅಲ್‌ಹಮ್ದುಲಿಲ್ಲಾಹ್ ಎಂದು ಹೇಳಬೇಕು.

  1. ಈ ಹದೀಸ್ ಅಲ್ಲಾಹನ ಔದಾರ್ಯವನ್ನು ತೋರಿಸುತ್ತದೆ. ಏಕೆಂದರೆ ಅಲ್ಲಾಹು ತನ್ನ ದಾಸರಿಗೆ ಆಹಾರವನ್ನು ಒದಗಿಸುತ್ತಾನೆ ಮತ್ತು ದಾಸರ ಸ್ತುತಿಯಿಂದ ಅವನು ಸಂತೃಪ್ತನಾಗುತ್ತಾನೆ.
  2. ಆಹಾರ ಪಾನೀಯ ಸೇವಿಸಿದ ನಂತರ ಅಲ್ಲಾಹನನ್ನು ಸ್ತುತಿಸುವಂತಹ ಸರಳ ವಿಧಾನಗಳಿಂದ ಅಲ್ಲಾಹನ ಸಂಪ್ರೀತಿಯನ್ನು ಪಡೆಯಬಹುದೆಂದು ಈ ಹದೀಸ್ ತಿಳಿಸುತ್ತದೆ.
  3. ಆಹಾರ ಪಾನೀಯ ಸೇವಿಸಿದ ನಂತರ ಸರ್ವಶಕ್ತನಾದ ಅಲ್ಲಾಹನನ್ನು ಸ್ತುತಿಸುವುದು ಆಹಾರ ಪಾನೀಯಗಳ ಶಿಷ್ಟಾಚಾರಗಳಲ್ಲಿ ಒಂದಾಗಿದೆ.

ಯಶಸ್ವಿಯಾಗಿ ರವಾನಿಸಲಾಗಿದೆ!