ಯಾರು ದಿನಕ್ಕೆ ನೂರು ಬಾರಿ ‘ಸುಬ್‌ಹಾನಲ್ಲಾಹಿ ವಬಿಹಮ್ದಿಹೀ’ ಎಂದು ಹೇಳುತ್ತಾರೋ, ಅವರ ಪಾಪಗಳು ಸಮುದ್ರದ ನೊರೆಯಷ್ಟೇ ಇದ್ದರೂ ಸಹ ಅಳಿಸಿಹೋಗುತ್ತವೆ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ದಿನಕ್ಕೆ ನೂರು ಬಾರಿ ‘ಸುಬ್‌ಹಾನಲ್ಲಾಹಿ ವಬಿಹಮ್ದಿಹೀ’ ಎಂದು ಹೇಳುತ್ತಾರೋ, ಅವರ ಪಾಪಗಳು ಸಮುದ್ರದ ನೊರೆಯಷ್ಟೇ ಇದ್ದರೂ ಸಹ ಅಳಿಸಿಹೋಗುತ್ತವೆ."
Sahih/Authentic. - Al-Bukhari and Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ದಿನಕ್ಕೆ ನೂರು ಬಾರಿ ‘ಸುಬ್‌ಹಾನಲ್ಲಾಹಿ ವಬಿಹಮ್ದಿಹೀ’ ಎಂದು ಹೇಳುತ್ತಾರೋ, ಅವರ ಪಾಪಗಳನ್ನು - ಅವು ಅಲೆಗಳು ಮತ್ತು ಬಿರುಗಾಳಿಗಳು ಉಂಟಾಗುವಾಗ ಸಮುದ್ರದ ನೀರಿನ ಮೇಲೆ ಕಾಣಿಸಿಕೊಳ್ಳುವ ಬಿಳಿ ನೊರೆಯಷ್ಟಿದ್ದರೂ ಸಹ - ಅಳಿಸಲಾಗುತ್ತದೆ ಮತ್ತು ಕ್ಷಮಿಸಲಾಗುತ್ತದೆ.

  1. ಈ ಪ್ರತಿಫಲವು ದಿನದಲ್ಲಿ ಸತತವಾಗಿ ನೂರು ಬಾರಿ ಹೇಳುವವನಿಗೂ ಅಥವಾ ಸಮಯ ಸಿಗುವಾಗಲೆಲ್ಲಾ ಸ್ವಲ್ಪ ಸ್ವಲ್ಪ ಹೇಳಿ ನೂರು ಪೂರ್ಣಗೊಳಿಸುವವನಿಗೂ ದೊರಕುತ್ತದೆ.
  2. ‘ತಸ್ಬೀಹ್’ (ಸುಬ್‌ಹಾನಲ್ಲಾಹ್) ಎಂದರೆ ಅಲ್ಲಾಹನನ್ನು ಎಲ್ಲಾ ರೀತಿಯ ಅಪೂರ್ಣತೆಗಳಿಂದ ಪರಿಶುದ್ಧಗೊಳಿಸುವುದು. ‘ಹಮ್ದ್’ (ಅಲ್‌ಹಮ್ದುಲಿಲ್ಲಾಹ್) ಎಂದರೆ ಅಲ್ಲಾಹನನ್ನು ಪ್ರೀತಿಸುವುದು ಮತ್ತು ಮಹಿಮೆಪಡಿಸುವುದರ ಜೊತೆಗೆ ಅವನ ಪರಿಪೂರ್ಣತೆಯನ್ನು ವರ್ಣಿಸುವುದು.
  3. ಹದೀಸ್‌ನಲ್ಲಿ ಉದ್ದೇಶಿಸಿರುವುದು ಸಣ್ಣ ಪಾಪಗಳ ಪರಿಹಾರವಾಗಿದೆ. ಮಹಾಪಾಪಗಳನ್ನು ಕ್ಷಮಿಸಬೇಕಾದರೆ ಪಶ್ಚಾತ್ತಾಪಪಡುವುದು ಅತ್ಯಗತ್ಯವಾಗಿದೆ.

ಯಶಸ್ವಿಯಾಗಿ ರವಾನಿಸಲಾಗಿದೆ!