ಎಲ್ಲಾ ಒಳ್ಳೆಯ ಕಾರ್ಯಗಳು ದಾನವಾಗಿವೆ

ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಎಲ್ಲಾ ಒಳ್ಳೆಯ ಕಾರ್ಯಗಳು ದಾನವಾಗಿವೆ."
Sahih/Authentic. - Al-Bukhari

ಮಾತು ಅಥವಾ ಕ್ರಿಯೆಗಳ ಮೂಲಕ ಮಾಡುವ ಸಹಾಯ ಮತ್ತು ಉಪಕಾರಗಳೆಲ್ಲವೂ ದಾನವಾಗಿದೆ ಮತ್ತು ಅದಕ್ಕೆ ಪ್ರತಿಫಲವಿದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುತ್ತಿದ್ದಾರೆ.

  1. ದಾನವೆಂದರೆ ಒಬ್ಬ ವ್ಯಕ್ತಿ ತನ್ನ ಆಸ್ತಿಯಿಂದ ಏನಾದರೂ ಕೊಡುವುದು ಮಾತ್ರವಲ್ಲ; ಬದಲಿಗೆ, ಒಬ್ಬ ವ್ಯಕ್ತಿ ಇತರರಿಗೆ ಹೇಳುವ ಮಾತು ಅಥವಾ ಮಾಡುವ ಕಾರ್ಯ ಎಲ್ಲವೂ ದಾನಗಳಾಗಿವೆಯೆಂದು ಈ ಹದೀಸ್ ತಿಳಿಸುತ್ತದೆ.
  2. ಒಳಿತು ಮಾಡಲು ಮತ್ತು ಇತರರಿಗೆ ಉಪಕಾರವಾಗುವ ಎಲ್ಲವನ್ನು ಮಾಡಲು ಈ ಹದೀಸ್ ಪ್ರೋತ್ಸಾಹಿಸುತ್ತದೆ.
  3. ಒಳಿತಿನ ಕಾರ್ಯಗಳಲ್ಲಿ ಯಾವುದನ್ನೂ ಕೀಳಾಗಿ ಕಾಣಬಾರದು ಎಂದು ಈ ಹದೀಸ್ ತಿಳಿಸುತ್ತದೆ. ಅದೊಂದು ಚಿಕ್ಕ ವಿಷಯವಾಗಿದ್ದರೂ ಸಹ.

ಯಶಸ್ವಿಯಾಗಿ ರವಾನಿಸಲಾಗಿದೆ!