ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್‌ನಲ್ಲಿ ಎರಡು ಸುಜೂದ್‌ಗಳ ಮಧ್ಯೆ ಮುಸಲ್ಮಾನನಿಗೆ ಅತ್ಯಂತ ಅಗತ್ಯವಿರುವ ಮತ್ತು ಇಹಲೋಕ ಹಾಗೂ ಪರಲೋಕದ ಎಲ್ಲಾ ಒಳಿತುಗಳನ್ನು ಒಳಗೊಂಡಿರುವ ಈ ಐದು ಪ್ರಾರ್ಥನೆಗಳನ್ನು ಪ್ರಾರ್ಥಿಸುತ್ತಿದರು. ಈ ಪ್ರಾರ್ಥನೆಯು ಕ್ಷಮೆಯಾಚನೆ, ಪಾಪಗಳನ್ನು ಮನ್ನಿಸುವುದು, ದಯೆ ತೋರುವುದು, ಸಂಶಯಗಳು, ಮೋಹಗಳು, ಕಾಯಿಲೆಗಳು ಮತ್ತು ರೋಗಗಳಿಂದ ಸೌಖ್ಯವನ್ನು ಪಡೆಯುವುದು, ಸನ್ಮಾರ್ಗ ಮತ್ತು ಸತ್ಯ ಮಾರ್ಗವನ್ನು ತೋರಿಸಿಕೊಡಲು ಪ್ರಾರ್ಥಿಸುವುದು ಮತ್ತು ಆ ಮಾರ್ಗದಲ್ಲಿ ದೃಢವಾಗಿ ನಿಲ್ಲುವುದು, ಸತ್ಯವಿಶ್ವಾಸ, ಜ್ಞಾನ, ಸತ್ಕರ್ಮ ಮತ್ತು ಧರ್ಮಸಮ್ಮತ ಹಾಗೂ ಶುದ್ಧವಾದ ರೀತಿಯಲ್ಲಿ ಹಣವನ್ನು ಸಂಪಾದಿಸುವುದು ಮುಂತಾದ ಎಲ್ಲವನ್ನೂ ಒಳಗೊಂಡಿದೆ.