ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ನಮ್ಮ ಪರಿಪಾಲಕನು (ಅಲ್ಲಾಹು) ಪ್ರತಿ ರಾತ್ರಿಯೂ, ಅದರ ಮೂರನೇ ಒಂದು ಭಾಗ ಉಳಿದಿರುವಾಗ, ಅತಿಕೆಳಗಿನ ಆಕಾಶಕ್ಕೆ ಇಳಿದು ಬರುತ್ತಾನೆ. ನಂತರ ತನ್ನನ್ನು ಕರೆದು ಪ್ರಾರ್ಥಿಸಲು ತನ್ನ ದಾಸರಿಗೆ ಒತ್ತಾಯಿಸುತ್ತಾನೆ. ಅವನನ್ನು ಕರೆದು ಪ್ರಾರ್ಥಿಸಿದವರಿಗೆ ಅವನು ಉತ್ತರ ನೀಡುತ್ತಾನೆ. ಅವರಿಗೆ ಬೇಕಾದುದನ್ನು ತನ್ನೊಡನೆ ಬೇಡಿಕೊಳ್ಳುವಂತೆ ಅವರಿಗೆ ಪ್ರೋತ್ಸಾಹಿಸುತ್ತಾನೆ. ಅವರು ಬೇಡಿದ್ದನ್ನು ಅವನು ಅವರಿಗೆ ನೀಡುತ್ತಾನೆ. ಅವರ ಪಾಪಗಳಿಗೆ ಕ್ಷಮೆ ಕೋರುವಂತೆ ಅವನು ಅವರಿಗೆ ಉತ್ತೇಜಿಸುತ್ತಾನೆ. ಅವನ ಸತ್ಯವಿಶ್ವಾಸಿ ದಾಸರಿಗೆ ಅವನು ಕ್ಷಮಿಸುತ್ತಾನೆ.