ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಮಾತು ಮತ್ತು ನಡವಳಿಕೆಯಲ್ಲಿ ಮೃದುತ್ವ, ಸೌಮ್ಯಭಾವ ಮತ್ತು ಸಾವಧಾನತೆಯಿದ್ದರೆ ಅದು ಮಾತು ಮತ್ತು ನಡವಳಿಕೆಗಳ ಸೌಂದರ್ಯ, ಪರಿಪೂರ್ಣತೆ ಮತ್ತು ಅಂದವನ್ನು ಹೆಚ್ಚಿಸುತ್ತದೆ ಮತ್ತು ಅವುಗಳಿಂದ ಆ ವ್ಯಕ್ತಿಗೆ ತನಗೆ ಬೇಕಾದುದನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಮೃದುತ್ವದ ಅಭಾವವು ವಿಷಯಗಳನ್ನು ದೋಷಪೂರಿತ ಮತ್ತು ಅಹಿತಕರಗೊಳಿಸುತ್ತದೆ. ಇದರಿಂದ ವ್ಯಕ್ತಿಗೆ ತನಗೆ ಬೇಕಾದುದನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುವುದಿಲ್ಲ. ಅವನು ಅದನ್ನು ಪಡೆದರೂ ಬಹಳ ಕಷ್ಟದಿಂದಲೇ ಪಡೆಯುತ್ತಾನೆ.